ನವದೆಹಲಿ : ಓನಿ ಗ್ರೂಪ್ ಕಾರ್ಪ್ ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ನೊಂದಿಗೆ ತನ್ನ ಭಾರತ ಘಟಕದ ವಿಲೀನ ಒಪ್ಪಂದವನ್ನ ರದ್ದುಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಝೀನ ಸ್ಥಾಪಕರ ಪುತ್ರ ಪುನೀತ್ ಗೋಯೆಂಕಾ ಅವರು ವಿಲೀನಗೊಂಡ ಘಟಕವನ್ನ ಮುನ್ನಡೆಸುತ್ತಾರೆಯೇ ಎಂಬ ಬಿಕ್ಕಟ್ಟಿನಿಂದಾಗಿ ಒಪ್ಪಂದವನ್ನ ರದ್ದುಗೊಳಿಸಲು ಜಪಾನಿನ ಕಂಪನಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
2021ರಲ್ಲಿ ಸಹಿ ಹಾಕಿದ ಒಪ್ಪಂದವು ಗೋಯೆಂಕಾ ಹೊಸ ಕಂಪನಿಯನ್ನ ಮುನ್ನಡೆಸುತ್ತದೆ ಎಂದು ಹೇಳಲಾಗಿದ್ದರೂ, ನಿಯಂತ್ರಕ ತನಿಖೆಯ ನಡುವೆ ಸೋನಿ ಇನ್ನು ಮುಂದೆ ಅವರನ್ನ ಸಿಇಒ ಆಗಿ ಬಯಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ವಿಲೀನಕ್ಕೆ ಅಗತ್ಯವಾದ ಕೆಲವು ಷರತ್ತುಗಳನ್ನ ಪೂರೈಸಲಾಗಿಲ್ಲ ಎಂದು ಹೇಳಿ ಒಪ್ಪಂದವನ್ನ ಮುಕ್ತಾಯಗೊಳಿಸಲು ಜನವರಿ 20ರ ವಿಸ್ತೃತ ಗಡುವಿನ ಮೊದಲು ಮುಕ್ತಾಯ ನೋಟಿಸ್ ಸಲ್ಲಿಸಲು ಸೋನಿ ಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ನಡೆದ ಸುದೀರ್ಘ ಸಭೆಗಳಲ್ಲಿ ಆರಂಭದಲ್ಲಿ ಒಪ್ಪಿಕೊಂಡಂತೆ, ವಿಲೀನಗೊಂಡ ಘಟಕದ ನೇತೃತ್ವ ವಹಿಸಲು ಗೋಯೆಂಕಾ ತಮ್ಮ ನಿಲುವನ್ನ ಸಮರ್ಥಿಸಿಕೊಂಡಿದ್ದಾರೆ ಎಂದು ಮತ್ತೊಬ್ಬ ವ್ಯಕ್ತಿ ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರದ ಪ್ರಮುಖ ವೈಶಿಷ್ಟ್ಯಗಳಾವುವು…? ಮಾಹಿತಿ ಇಲ್ಲಿದೆ…
BREAKING : ಜುಲೈ ಮೊದಲ ವಾರದಲ್ಲಿ ‘NEET PG’ ಪ್ರವೇಶ ಪರೀಕ್ಷೆ, ಆಗಸ್ಟ್’ನಿಂದ ಕೌನ್ಸೆಲಿಂಗ್ : ವರದಿ