ಬೆಂಗಳೂರು: 10 ರೂ ನಾಣ್ಯ ಚಲಾವಣೆಯಲ್ಲಿ ಇಲ್ಲ. ಯಾರು ತಗೊಳ್ಳೋದಿಲ್ಲ. ನಿಷೇಧಿಸಿದೆ ಹಾಗೆ, ಹೀಗೆ ಅಂತ ಸುದ್ದಿ ಹಬ್ಬಿತ್ತು. ಆದ್ರೇ ಭಾರತೀಯ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. 10 ರೂ ನಾಣ್ಯ ಚಾಲನೆಯಲ್ಲಿದೆ ಅಂತ ಸ್ಪಷ್ಟ ಪಡಿಸಿತ್ತು. ಇದರ ಮಧ್ಯೆ KSRTC, BMTC ಬಸ್ಸುಗಳಲ್ಲಿ ಕಂಡಕ್ಟರ್ 10 ರೂ ನಾಣ್ಯ ಪಡೆಯೋದಕ್ಕೆ ನಿರಾಕರಿಸುತ್ತಿದ್ದರು. ಆದ್ರೇ ಹೀಗೆ ನಿರಾಕರಿಸುವಂತಿಲ್ಲ. ಕಡ್ಡಾಯವಾಗಿ ಪ್ರಯಾಣಿಕರಿಂದ ಪಡೆಯುವಂತೆ ಸಾರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ.
ಕೆ ಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಏರೋ ಅನೇಕ ಪ್ರಯಾಣಿಕರು ತಮ್ಮ ಬಳಿಯಿದ್ದಂತ 10 ರೂ ನಾಣ್ಯವನ್ನು ಟಿಕೆಟ್ ಖರೀದಿಸೋದಕ್ಕೆ ನೀಡಿದಾಗ ಕಂಡಕ್ಟರ್ ಪಡೆಯಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಸಾರಿಗೆ ಇಲಾಖೆಗೆ ಹಲವು ಪ್ರಯಾಣಿಕರು ದೂರು ನೀಡಿದ್ದರು. ಆರ್ ಬಿಐ ಚಲಾವಣೆಯಲ್ಲಿದೆ ಅಂತ ಸ್ಪಷ್ಟ ಪಡಿಸಿದೆ. ಹೀಗಿದ್ದೂ ಕಂಡಕ್ಟರ್ ಪಡೆಯದೇ ಇರೋದು ಸರಿಯಲ್ಲ ಅಂತ ಆಕ್ಷೇಪಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರಯಾಣಿಕರು 10 ರೂ ನಾಣ್ಯವನ್ನು ನೀಡಿದ್ರೇ ಪಡೆಯಬೇಕು. ಒಂದು ವೇಳೆ ಪಡೆಯದೇ, ಆ ಬಗ್ಗೆ ಪ್ರಯಾಣಿಕರಿಂದ ದೂರು ಬಂದ್ರೆ ಅಂತಹ ಬಸ್ಸಿನ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಸಾರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ.
ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ : ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
BIG NEWS: ಅಯೋಧ್ಯೆ ರಾಮ ಮಂದಿರಕ್ಕೆ ಪವಿತ್ರ ‘ಕಾವೇರಿ ತೀರ್ಥ’ ರವಾನೆ | Ram mandir