ರಾಯಚೂರು:ತಾಯಿ ಮಗನ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿದ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.
ಘಟನೆ ಜನವರಿ 4 ರಂದು ನಡೆದಿದೆ. ಅಂದು ಸಂಜೆ ತಾಯಿ ಗಂಗಮ್ಮ ತನ್ನ ಮಗನ ಜೊತೆಗೆ ಆಸ್ಪತ್ರೆಗೆ ಹೋಗಿದ್ದರು.ಆ ಸಮಯದಲ್ಲಿ ಬೀದಿ ನಾಯಿಯೊಂದ 15 ವರ್ಷದ ಮಗನ ಮೇಲೆ ಕಚ್ಚಿ ಎಳೆದಾಡಿದೆ.ಇದರಿಂದ ಗಾಭರಿಗೊಂಡ ತಾಯಿ ಗಂಗಮ್ಮ ಮಗನನ್ನು ಕಾಪಾಡಲು ನಾಯಿಯನ್ನು ಹಿಡಿದು ಎಳೆದಾಡಿದ್ದಾರೆ.ನಾಯಿ ಆಕೆಯನ್ನು ಕೂಡ ಬಿಡದೆ ಕಚ್ಚಿದೆ.
ಕೊನೆಗೆ ಸುತ್ತಮುತ್ತಲಿನ ಜನ ಓಡಿ ಬಂದು ನಾಯಿಯನ್ನು ಬಡಿದು ಓಡಿಸಿದ್ದಾರೆ.ನಗರದ ಆದರ್ಶ ಕಾಲೋನಿಯಲ್ಲಿ ಈ ಭೀಕರ ಘಟನೆ ನಡೆದಿದೆ.
ಸದ್ಯ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ತಾಯಿ-ಮಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆದರೆ ಬೀದಿ ನಾಯಿ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಬೆಚ್ಚಿಬೀಳುವಂತಿದೆ.