ಬೆಂಗಳೂರು:ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಯುವನುಧಿಗೆ ಇಲ್ಲಿಯವರೆಗೆ ಒಟ್ಟು 32,184 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಶೇ 6 ಪ್ರತಿಶತದಷ್ಟು ಅರ್ಹ ಫಲಾನುಭವಿಗಳು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ 2023 ರಲ್ಲಿ ಪದವಿ ಮತ್ತು ಡಿಪ್ಲೊಮಾ ಕೋರ್ಸ್ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಯುವನಿಧಿ ಯೋಜನೆಗೆ ಬೆಳಗಾವಿಯಲ್ಲಿ 3,900 ಅರ್ಜಿಗಳು ಸಲ್ಲಿಕೆಯಾಗಿದ್ದು, ಬೆಂಗಳೂರು ನಗರದಲ್ಲಿ 2,853 ಅರ್ಜಿಗಳು ಸಲ್ಲಿಕೆಯಾಗಿವೆ.ಆದರೆ ಇತರೆ ಜಿಲ್ಲೆಗಳಿಂದ ನಿರೀಕ್ಷಿತ ಅರ್ಜಿಗಳು ಸಲ್ಲಿಕೆ ಆಗಿಲ್ಲ.ಯುವನಿಧಿ ಯೋಜನೆ ಅರ್ಜಿ ಸಲ್ಲಿಕೆ ಆರಂಭವಾಗಿ ಹತ್ತು ದಿನಗಳು ಕಳೆದಿವೆ.ಆದರೆ ಈ ಹತ್ತು ದಿನಗಳಲ್ಲಿ ಬೆಳಗಾವಿ ಮತ್ತು ಬೆಂಗಳೂರು ನಗರದಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿವೆ.
ಬಾಗಲಕೋಟೆ 1,943, ನಂತರದ ಸ್ಥಾನದಲ್ಲಿ ವಿಜಯಪುರ 1,741 ಮತ್ತು ರಾಯಚೂರು 1,714 ಜಿಲ್ಲೆಗಳಿವೆ. ಉಡುಪಿ 236, ಕೊಡಗು 120, ಚಾಮರಾಜನಗರ 237 ಮತ್ತು ರಾಮನಗರ ಜಿಲ್ಲೆಯಲ್ಲಿ 329 ಅರ್ಜಿಗಳು ಸಲ್ಲಿಕೆಯಾಗಿವೆ.