ಬೆಂಗಳೂರು: ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ನಂತ್ರ, ಅವುಗಳ ವ್ಯವಸ್ಥಿತ ಜಾರಿಗೆ ಟೈಮ್ ಲೈನ್ ನೀಡಲಾಗಿತ್ತು. ಈ ಬಳಿಕ ಎಲ್ಲಾ ಫಲಾನುಭವಿ ಯೋಜನೆಗಳು ಮತ್ತು ಸಹಾಯಧನವನ್ನು ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ ಮೂಲಕ ನಿರ್ವಹಿಸೋ ಮಹತ್ವದ ಕ್ರಮ ಕೈಗೊಂಡಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಲ್ಲಾ ಫಲಾನುಭವಿ ಯೋಜನೆಗಳು ಮತ್ತು ಸಹಾಯಧನವನ್ನು ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ ಮೂಲಕ ನಿರ್ವಹಿಸಲು ಸೂಚಿಸಿಲಾಗಿರುತ್ತದೆ ಅಂತ ತಿಳಿಸಿದ್ದಾರೆ.
ಇಲ್ಲಿಯವರೆಗೂ 379 ಯೋಜನೆಗಳನ್ನು ಈ ವೇದಿಕೆಯಲ್ಲಿ ಒಳತರಲಾಗಿದೆ. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು 2018-2020ನೇ ಸಾಲಿನಲ್ಲಿ ನಡೆಸಿದ ನೇರ ನಗರು ವರ್ಗಾವಣೆ ಮೇಲಿನ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನ ವರದಿಯಲ್ಲಿ ಈ ಕೆಳಕಂಡ ನೇರ ನಗದು ವರ್ಗಾವಣೆ ತಂತ್ರಾಂಶದ ಚಟುವಟಿಕೆಗಳಿಗೆ ಕಾಲ ಮಿತಿಯನ್ನು ನಿಗದಿ ಪಡಿಸಲು ಸೂಚಿಸಿರುತ್ತಾರೆ ಅಂತ ತಿಳಿಸಿದ್ದಾರೆ.
ಸೇವೆಗಳ ಸಕಾಲಿಕ ವಿತರಣೆಯಲ್ಲಿ ವಿಳಂಬವನ್ನು ತಡೆಗಟ್ಟಲು ವಿವಿಧ ಹಂತದಲ್ಲಿ ವಿಲೇವಾರಿ ಮಾಡುವುದು. ವಿಫಲವಾದ, ತಿರಸ್ಕೃತವಾದ ವಹಿವಾಟುಗಳನ್ನು ಪುನಹ ಪಾವತಿಸಲು ಕ್ರಮವಹಿಸುವುದು. ತಪ್ಪಾದ ಖಾತೆಗೆಗಳಿಗೆ ಜಮೆಯಾದ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಅಂತ ಹೇಳಿದ್ದಾರೆ.
ಡಿಬಿಟಿ ವೇದಿಕೆಯಲ್ಲಿ Authoriser Loginನಲ್ಲಿ ಅನುಮೋದಿಸಲು 3 ದಿನ ನಿಗದಿ ಪಡಿಸಲಾಗಿದೆ. ಡಿಬಿಟಿ ವೇದಿಕೆಯಲ್ಲಿ ಅಪ್ರೂವರ್ ಲಾಗಿನ್ ನಲ್ಲಿ ಅನುಮೋದಿಸಲು 2 ದಿನ, ಖಜಾನೆ-2ನಲ್ಲಿ ಡಿಡಿಓ, ಸಿಎಸ್ಓ ಲಾಗಿನ್ ನಲ್ಲಿ ಅನುಮೋದಿಸಿ ಬಿಲ್ ತಯಾರಿಸಲು 5 ದಿನ, ಖಜಾನೆ-2ರಲ್ಲಿ ಖಜಾನಾಧಿಕಾರಿಗಳು ಅನುಮೋದಿಸಲು 2 ದಿನ, ಸ್ಕ್ರೋಲ್ ಜನೆರೇಷನ್ ಮತ್ತು ಫೈನಲ್ ಅಪ್ರೂವಲ್ ಗೆ 2 ದಿನ ಹಾಗೂ ಎನ್ ಸಿಐ ಪರಿಶೀಲನೆ ನಂತ್ರ ತಿರಸ್ಕೃತಗೊಂಡ ವಹಿವಾಟುಗಳನ್ನು ಪಾವತಿಗೆ ಸಲ್ಲಿಸಲು 7 ದಿನ ಡೆಡ್ ಲೈನ್ ನೀಡಿದ್ದಾರೆ.
BREAKING: ದಕ್ಷಿಣ ಆಫ್ರಿಕಾ ವಿರುದ್ಧ ‘2ನೇ ಟೆಸ್ಟ್’ನಲ್ಲಿ ‘ಭಾರತ’ಕ್ಕೆ ಭರ್ಜರಿ ಗೆಲುವು | India vs South Africa
BREAKING: ದತ್ತಪೀಠ ಗೋರಿ ಧ್ವಂಸ ‘ಕೇಸ್ ರೀ ಓಪನ್’ ಸುಳ್ಳು – ‘ಸಿಎಂ ಸಿದ್ಧರಾಮಯ್ಯ’ ಸ್ಪಷ್ಟನೆ