ಚಾಮರಾಜನಗರ: ನಗರದ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎಟಿಎಂ ಘಟಕದೊಳಗೆ ಯುವತಿಯಿಂದ ಹಣ ಕಿತ್ತುಕೊಳ್ಳಲು ವಿಫಲ ಯತ್ನ ನಡೆಸಿದ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಛಾರ್ಜ್ ಶೀಟ್ ಸಲ್ಲಿಸಲು ತಗುಲಿದ ವೆಚ್ಚವನ್ನ ನನ್ನಿಂದ ಪಡೆದಿದ್ದಾರೆ ಎಂದು ಸ್ವತಃ ಸಂತ್ರಸ್ಥೆ ಯುವತಿಯೇ ನ್ಯಾಯಾಧೀಶರ ಮುಂದೆ ಅಳಲು ತೊಡಗಿರುವ ಪ್ರಸಂಗ ನಡೆದಿದೆ ಎನ್ನಲಾಗಿದೆ.
ಇತ್ತಿಚೆಗೆ ನಗರದ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಯುವತಿಯನ್ನು ಹಿಂಬಲಿಸಿದ ಯುವಕನೊಬ್ಬ ಆಕೆಯ ಬಳಿ ಇದ್ದ ಪರ್ಸ್ ಹಾಗೂ ಹಣವನ್ನು ಕಿತ್ತುಕೊಳ್ಳಲು ಮುಂದಾಗಿದ್ದೇನೆ. ಗಾಬರಿ ಯಾಗಿ ಕೂಗಿ ಕೊಂಡು ಹೊರಬಂದ ಯುವತಿ ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಳು.
ಈ ಪ್ರಕರಣದ ಸಂಬಂದ ಜಾರ್ಜ್ ಸೀಟ್ ಸಲ್ಲಿಸಲು ಅಗತ್ಯವಾದ ಪೇಪರ್ ಇತರೇ ಸಲಕರಣೆ, ಪೋಟೋಗಳು ಮತ್ತು ಸಿಸಿ ಟಿವಿ ಪೋಟೇಜ್ಸಂಗ್ರಹಿಸಲು 16 ಜಿಬಿಸಾರ್ಮಥ್ಯದಪೆನ್ ಡ್ರೈವ್ ಸೇರಿದಂತೆ ಇತರೇ ಖರ್ಚು ವೆಚ್ಚವನ್ನು ಪೊಲೀಸರು ಸಂತ್ರಸ್ತ ಯುವತಿಯಿಂದೇ ಪಡೆದುಕೊಂಡಿದ್ದಾರೆ ಎಂದು ಯುವತಿ ನೇರವಾಗಿ ನ್ಯಾಯಾಧೀಶರ ಮುಂದೆ ಪ್ರಕರಣ ಸಂಬಂದ ಸಾಕ್ಷ್ಯ ಹೇಳುವ ಜೊತೆಗೆ ಇದನ್ನು ನನಗೆ ವಾಪಸ್ ಕೊಡಿಸಿ ಎಂದು ಕೇಳಿಕೊಂಡಿದ್ದಾಳೆ ಎನ್ನಲಾಗಿದೆ. ಇದರಿಂದ ವಿಚಲಿತರಾದ ನ್ಯಾಯಾಧೀಶರು ಇದೆಲ್ಲವು ಪೊಲೀಸರ ಕರ್ತವ್ಯ. ಅವರಿಗೆ ಠಾಣೆ ನಿರ್ವಹಣೆ ಗಾಗಿ ಹಣ ಬರುತ್ತಿದೆ, ನೀನು ಏಕೆ ಕೊಟ್ಟೆ ಎಂದು ಮರು ಪ್ರಶ್ನಿಸಿದ್ದಾರೆ. ಆಗ ನಡೆದ ಘಟನೆಯ ಬಗ್ಗೆ ಯುವತಿ ಎಲ್ಲವನ್ನು ನ್ಯಾಯಾದೀಶರ ಮುಂದೆ ವಿವರಿಸಿದ್ದಾಳೆ ಎಂದು ತಿಳಿದು ಬಂದಿದೆ.
ಎಲ್ಲವನ್ನು ದಾಖಲು ಮಾಡಿಕೊಂಡಿರುವ ನ್ಯಾಯಾಧೀಶರು ಪೊಲೀಸರ ನಡೆ ವಿರುದ್ದ ಛೀಮಾರಿ ಆಗಿರುವುದಲ್ಲದೇ, ಜ. 2ರಂದು ನಿಮ್ಮ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಬಂಧಖರ್ಚು ವೆಚ್ಚ ಕಡತಗಳನ್ನು ಕೋರ್ಟುಗೆ ಹಾಜರು ಪಡಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂದ ಪಟ್ಟಣ ಠಾಣಾ ಹಾಗೂ ಜಿಲ್ಲಾ ವರೀಷ್ಟಾದಿಕಾರಿಗಳನ್ನ ಸಂಪರ್ಕಿಸಲಾಗಿ ಉತ್ತರ ನೀಡದೆ ಮೌನವಾಗಿದ್ದು, ಬಹುತೇಕ ಠಾಣೆಗಳು ಇಂದಿಗೂ ಇದೆಲ್ಲ ಖರ್ಚುವೆಚ್ಚಗಳನ್ನ ದೂರುದಾರರಿಂದಲೆ ಬರಿಸುತ್ತಿದ್ದು ರಾಜ್ಯದ ಪೊಲೀಸ್ ಮಹಾನಿರ್ದೇಶಕರೆ ಎಲ್ಲ ಠಾಣೆಗಳಿಗೂ ಸೂಕ್ತ ಮಾರ್ಗದರ್ಶನ ನೀಡಿ ಕ್ರಮಕೈಗೊಳ್ಳದೆ ಹೋದರೆ ಭ್ರಷ್ಟಾಚಾರ ಕೂಪವಾಗದೆ ಇರಲಾರದು.