ಲುಧಿಯಾನ: ಪಂಜಾಬ್’ನ ಲುಧಿಯಾನದ ಖನ್ನಾ ಪ್ರದೇಶದ ಬಳಿಯ ಫ್ಲೈಓವರ್ನಲ್ಲಿ ಇಂದು ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟವಾದ, ಕಪ್ಪು ಹೊಗೆ ಆಕಾಶಕ್ಕೆ ಹರಡಿದೆ.
ಖನ್ನಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಧನ ಟ್ಯಾಂಕ್’ಗೆ ಬೆಂಕಿ ಹೊತ್ತಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಇದು ಸಂಚಾರವನ್ನ ಸ್ಥಗಿತಗೊಳಿಸಿದೆ. ಇನ್ನು ತೈಲ ಟ್ಯಾಂಕರ್ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದೇ ಬೆಂಕಿಗೆ ಕಾರಣ ಎನ್ನಲಾಗ್ತಿದೆ.
ಘಟನೆಯ ಫೋಟೋಗಳು ಮತ್ತು ವೀಡಿಯೊಗಳು ಫ್ಲೈಓವರ್ ಕೆಳಗೆ ವಾಹನಗಳು ಹಾದುಹೋಗುವಾಗ ಕಪ್ಪು ಹೊಗೆ ದಟ್ಟತೆಯನ್ನ ತೋರಿಸುತ್ತದೆ. ಸದ್ಯದ ಮಾಹಿತಿ ಪ್ರಕಾರ, ಯಾವುದೇ ಸಾವುನೋವುಗಳು ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ.
ತುರ್ತು ತಂಡಗಳು ಸ್ಥಳಕ್ಕೆ ತಲುಪಿದ್ದು, ಭಾರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ.
#WATCH | Punjab: A massive fire broke out in Khanna, Ludhiana after an oil tanker hit a divider and overturned. pic.twitter.com/JrPrKVNmaQ
— ANI (@ANI) January 3, 2024
ಲಕ್ಷದ್ವೀಪದಲ್ಲಿ 1,156 ಕೋಟಿ ರೂಪಾಯಿಗಳ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಎಚ್ಚರ : ‘UPI’ ಹಗರಣಕ್ಕೆ ಬಲಿಯಾಗ್ಬೇಡಿ.! ಸುರಕ್ಷಿತ ಈ 4 ವಿಧಾನ ಬಳಸಿ.!
Viral Video : ರಾಮ ಮಂದಿರದ ‘ಆಮಂತ್ರಣ ಪತ್ರಿಕೆ’ಯ ಫಸ್ಟ್ ಲುಕ್ ವೈರಲ್