ಬೆಂಗಳೂರು: ಹೊಸ ವರ್ಷಾಚರಣೆಯ ಮರುದಿನವೇ ಮದ್ಯದ ಮೇಲಿನ ದರವನ್ನು ಶೇ. 20ರಷ್ಟು ಹೆಚ್ಚಳ ಮಾಡಿ ಉತ್ಪಾದನ ಕಂಪೆನಿಗಳು ಹೆಚ್ಚಳ ಮಾಡಿದ್ದು, ಈ ಮೂಲಕ ಮದ್ಯಪ್ರಿಯರ ಗಂಟಲು ಇನ್ನೂ ಸುಡುವಂತೆ ಮಾಡಿದೆ.
ಈ ನಡುವೆ ಇದ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಸರಕಾರ ಯಾವುದೇ ಮದ್ಯದ ದರ ಹೆಚ್ಚಿಸಿಲ್ಲ. ನಾವೇನಿದ್ದರೂ ತೆರಿಗೆಯಲ್ಲಿ ಪರಿಷ್ಕರಣೆ ಮಾಡುತ್ತೇವೆ. ಅಬಕಾರಿ ಶುಲ್ಕ ಹೆಚ್ಚಿಸುವುದಿದ್ದರೆ ಮೊದಲೇ ತಿಳಿಸುತ್ತೇವೆ ಅಂತ ಹೇಳಿದ್ದಾರೆ. ಆದರೆ ಮದ್ಯಪ್ರಿಯರು ಮಾತ್ರ ಬೆಲೆ ಹೆಚ್ಚಳದಿಂದ ಕಿಕ್ ಇಳಿಸಿಕೊಳ್ಳುತ್ತಿದ್ದು, ಸರ್ಕಾರ ವಿರುದ್ದ ಕಿಡಿಕಾರುತ್ತಿದ್ದಾರೆ. ಹಾಗಾದ್ರೇ ; ಯಾವ ಬ್ರಾಂಡ್ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ
1. ಓಟಿ 180 ಎಂಎಲ್
ಸದ್ಯದ ದರ : 90 ರೂಪಾಯಿ
ಜನವರಿ 1ರಿಂದ 111 ರೂಪಾಯಿ
2. ಬಿಪಿ 180 ಎಂಎಲ್
ಸದ್ಯದ ದರ: 110 ರೂಪಾಯಿ
ಜನವರಿಯಿಂದ 145 ರೂಪಾಯಿ
3. 8PM (180 ಎಂಎಲ್)
ನಿನ್ನೆಯ ದರ : 90 ರೂಪಾಯಿ
ಇಂದಿನ ದರ : 111 ರೂಪಾಯಿ