ಬೀದರ್ :ವದಂತಿ ಅನ್ನುವುದು ಏನೆಲ್ಲಾ ರಾದ್ದಾಂತ ಮಾಡುತ್ತೆ ಅನ್ನೋದಕ್ಕೆ ಬೀದರ್ ಜಿಲ್ಲೆಯಲ್ಲಿ ನಡೆದ ಘಟನೆಯೇ ಸಾಕ್ಷಿ. ಬೀದರ್ ಜಿಲ್ಲೆಯಲ್ಲಿ ಒಂದು ಸುಳ್ಳು ಸುದ್ದಿ ಹರಡಿದ್ದು ಅದನ್ನು ನಂಬಿದ ಜನ ಪೆಟ್ರೋಲ್ ಬಂಕ್ ಗೆ ತಮ್ಮ ಗಾಡಿಗಳಿಗೆ ಪೆಟ್ರೋಲ್ ,ಡಿಸೇಲ್ ತುಂಬಿಸಿಕೊಳ್ಳಲು ಕ್ಯೂ ನಿಂತಿದ್ದಾರೆ.
ಅಷ್ಟಕ್ಕೂ ಆಗಿದ್ದಿಷ್ಟು.ಮೂರು ದಿನ ಪೆಟ್ರೋಲ್ ಬಂದ್ ಎನ್ನುವ ವಂದತಿ ಬೀದರ್ ಜಿಲ್ಲೆಯಲ್ಲಿ ಹಬ್ಬಿತ್ತು.
ಇದನ್ನು ನಂಬಿದ ಜನರು ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಲು ಬಂಕ್ ಮುಂದೆ ಮುಗಿಬಿದ್ದರು. ಜಿಲ್ಲೆಯ ಪ್ರತಿಯೊಂದು ಬಂಕ್ನಲ್ಲಿ ಜನರು ತಮ್ಮ ತಮ್ಮ ಬಳಿಯಿರುವ ಬೈಕ್, ಕಾರು, ಟ್ರ್ಯಾಕ್ಟ್ರ್ ಸೇರಿದಂತೆ ಇನ್ನಿತರ ವಾಹನಗಳನ್ನು ತೆಗೆದುಕೊಂಡು ಜನ ಕ್ಯೂ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದರು.