ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 18 ಗಂಟೆ ಈ ದೇಶಕ್ಕಾಗಿ ಕೆಲಸ ಮಾಡ್ತಿದ್ದಾರೆ ಎನ್ನುತ್ತಾರೆ. ಆದ್ರೇ ಕರ್ನಾಟಕ ಬರದಿಂದ ತತ್ತರಿಸುತ್ತಿದೆ. ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡೋದಕ್ಕೆ 18 ನಿಮಿಷ ಸಮಯ ಕೂಡ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ ಅಂತ ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತಂತೆ ಇಂದು ಎಕ್ಸ್ ಮಾಡಿದ್ದು, ಪತ್ರ ಬರೆದದ್ದಾಯ್ತು, ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಯ್ತು, ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದ್ದಾಯ್ತು, 18 ಗಂಟೆ ಕೆಲಸ ಮಾಡುವ ಮೋದಿಯವರಿಗೆ ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಗಮನಿಸಿ ಪರಿಹಾರ ಒದಗಿಸಲು ಕನಿಷ್ಠ 18 ನಿಮಿಷ ಸಮಯವಿಲ್ಲವೇ ಬಿಜೆಪಿ ? ಎಂದು ಪ್ರಶ್ನಿಸಿದೆ.
ಬಿಜೆಪಿಯ 25 ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಇದುವರೆಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಕೆಲಸ ಮಾಡಿಲ್ಲವೇಕೆ? ಬಿಜೆಪಿಗರಿಗೆ ಕನ್ನಡಿಗರ ಮತ ಮಾತ್ರ ಬೇಕು, ಕನ್ನಡಿಗರ ಹಿತ ಬೇಡವಾಗಿದೆ ಅಂತ ಕಿಡಿಕಾರಿದೆ.
ಪತ್ರ ಬರೆದದ್ದಾಯ್ತು, ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಯ್ತು, ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದ್ದಾಯ್ತು,
18 ಗಂಟೆ ಕೆಲಸ ಮಾಡುವ ಮೋದಿಯವರಿಗೆ ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಗಮನಿಸಿ ಪರಿಹಾರ ಒದಗಿಸಲು ಕನಿಷ್ಠ 18 ನಿಮಿಷ ಸಮಯವಿಲ್ಲವೇ @BJP4Karnataka?
ಬಿಜೆಪಿಯ 25 ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಇದುವರೆಗೂ… pic.twitter.com/LsUPcbqZp3
— Karnataka Congress (@INCKarnataka) January 2, 2024
ರೈಲು ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ: ಕೇಂದ್ರದಿಂದ ವಿವರಗಳನ್ನು ಕೋರಿದ ಸುಪ್ರೀಂ ಕೋರ್ಟ್
BIG UPDATE: ಜಪಾನ್ ಏರ್ಲೈನ್ಸ್ ವಿಮಾನ ಬೆಂಕಿ ಅವಘಡ ಪ್ರಕರಣ: 400 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು