ಟೋಕಿಯೊ : ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಜಪಾನ್ ಏರ್ಲೈನ್ಸ್ ಜೆಟ್ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ವಿಮಾನವು ಬೆಂಕಿಯಲ್ಲಿ ಸ್ಫೋಟಗೊಳ್ಳುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ಎಲ್ಲಾ 379 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಜಪಾನ್ ಕೋಸ್ಟ್ ಗಾರ್ಡ್ ತನ್ನ ವಿಮಾನವೊಂದು ಪ್ರಯಾಣಿಕರ ಜೆಟ್’ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಕೋಸ್ಟ್ ಗಾರ್ಡ್ ವಿಮಾನದ ಆರು ಸಿಬ್ಬಂದಿಗಳಲ್ಲಿ ಐವರು ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಪೈಲಟ್’ನನ್ನ ಸ್ಥಳಾಂತರಿಸಲಾಗಿದೆ ಎನ್ನಲಾಗ್ತಿದ್ದು, ಘಟನೆಯ ನಂತರ ಹನೆಡಾ ಎಲ್ಲಾ ರನ್ವೇಗಳನ್ನ ಮುಚ್ಚಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ತಿಳಿಸಿದ್ದಾರೆ.
#WATCH | A Japan Airlines jet was engulfed in flames at Tokyo's Haneda airport after a possible collision with a Coast Guard aircraft, with the airline saying that all 379 passengers and crew had been safely evacuated: Reuters
(Source: Reuters) pic.twitter.com/fohKUjk8U9
— ANI (@ANI) January 2, 2024
ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ- ಸಿಎಂ ಸಿದ್ಧರಾಮಯ್ಯ
“ಮಾರ್ಚ್ 12ರಿಂದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮೇಲೆ ದಾಳಿ” : ಖಲಿಸ್ತಾನಿ ಉಗ್ರ ‘ಪನ್ನು’ ಹೊಸ ಬೆದರಿಕೆ