ಟೋಕಿಯೊ: ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್ ವೇಯಲ್ಲಿ ಮಂಗಳವಾರ ಜಪಾನ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೂರದರ್ಶನ ಚಿತ್ರಗಳು ತೋರಿಸಿವೆ. ಆದ್ರೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಮಿಕರು ತುರ್ತು ನಿರ್ಗಮನ ದ್ವಾರದಿಂದ ಹೊರ ಓಡಿ ಬಂದ ಪರಿಣಾಮ, 367 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿದು ಬಂದಿದೆ.
ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಮಂಗಳವಾರ ಜಪಾನ್ ಏರ್ಲೈನ್ಸ್ ವಿಮಾನವು ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ನಿಪ್ಪಾನ್ ಟಿವಿ ವರದಿ ಮಾಡಿದೆ.
ಸಾರ್ವಜನಿಕ ಪ್ರಸಾರಕ ಎನ್ಎಚ್ಕೆಯಲ್ಲಿನ ಲೈವ್ ತುಣುಕುಗಳು ವಿಮಾನದ ಕಿಟಕಿಗಳಿಂದ ಜ್ವಾಲೆಗಳು ಹೊರಬರುತ್ತಿರುವುದನ್ನು ತೋರಿಸಿದೆ. ವಿಮಾನದಲ್ಲಿದ್ದ ಸುಮಾರು 400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜಪಾನ್ ಏರ್ಲೈನ್ಸ್ ಅನ್ನು ಉಲ್ಲೇಖಿಸಿ ಎನ್ಎಚ್ಕೆ ಹೇಳಿದೆ.
ಎನ್ಎಚ್ಕೆ ಪ್ರಸಾರದ ಚಿತ್ರಗಳು ವಿಮಾನದ ಕೆಳಗಡೆಯಿಂದ ಜ್ವಾಲೆಗಳು ಬರುತ್ತಿರುವುದನ್ನು ತೋರಿಸಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
Bitcoin: ಏಪ್ರಿಲ್.2022ರ ನಂತರ ಮೊದಲ ಬಾರಿಗೆ ‘45,000 ಡಾಲರ್’ ಗಡಿದಾಟಿದ ‘ಬಿಟ್ಕಾಯಿನ್’
ರೈಲು ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ: ಕೇಂದ್ರದಿಂದ ವಿವರಗಳನ್ನು ಕೋರಿದ ಸುಪ್ರೀಂ ಕೋರ್ಟ್