ಬೆಂಗಳೂರು : ಕೋವಿಡ್-19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೇ ಉಳಿದಿರುವ 60 ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಈ ಹಿಂದೆ ಕೋವಿಡ್-19 ಲಸಿಕೆ ಪಡೆಯದೇ ಇರುವ ಆರೋಗ್ಯ ಕಾರ್ಯಕರ್ತೆಯರು ಮತ್ತು ಈ ಗುಂಪಿಗೆ ಸೇರಿದ ಫಲಾನುಭವಿಗಳು ಜಿಲ್ಲಾಸ್ಪತ್ರೆ ಅಥವಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋರ್ಬಿವ್ಯಾಕ್ಸ್ ಲಸಿಕೆ ಪಡೆದುಕೊಳ್ಳಬಹುದು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ರಾಜ್ಯ ಆರೋಗ್ಯ ಇಲಾಖೆಯು, ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್ – 19 ಲಸಿಕಾರಣ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ. ಆದರೆ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಪಡೆದೇ ಇರುವ ಫಲಾನುಭವಿಗಳು ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕು. ಜಿಲ್ಲೆಗೆ 820 ಡೋಸ್ ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆ ಸರಬರಾಜಾಗಿದ್ದು ಮುನ್ನೆಚ್ಚರಿಕೆ ಡೋಸ್ ಆಗಿ ಬಳಸಲು ಸೂಚಿಸಿದೆ.
ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆಯನ್ನು ವಿಜಾತಿ(ಹೆಟೆರೊಲಾಗಸ್)ಮುನ್ನೆಚ್ಚರಿಕೆ ಡೋಸ್ ಆಗಿ ನೀಡಬಹುದಾಗಿರುತ್ತದೆ. ಆದ್ದರಿಂದ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2 ಡೋಸ್ ಲಸಿಕೆ ಪಡೆದು 06 ತಿಂಗಳುಗಳು ಅಥವಾ 26 ವಾರಗಳನ್ನು ಪೂರೈಸಿದ 18 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲಾನುಭವಿಗಳು ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಬಹುದಾಗಿರುತ್ತದೆ ಎಂದು ತಿಳಿಸಿದೆ.
Bitcoin: ಏಪ್ರಿಲ್.2022ರ ನಂತರ ಮೊದಲ ಬಾರಿಗೆ ‘45,000 ಡಾಲರ್’ ಗಡಿದಾಟಿದ ‘ಬಿಟ್ಕಾಯಿನ್’
ರೈಲು ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ: ಕೇಂದ್ರದಿಂದ ವಿವರಗಳನ್ನು ಕೋರಿದ ಸುಪ್ರೀಂ ಕೋರ್ಟ್