ಬೆಂಗಳೂರು: ರಾಜ್ಯ ಸರ್ಕಾರದ ( Karnataka Government ) ಐದನೇ ಗ್ಯಾರಂಟಿ ಯೋಜನೆಯಾಗಿ ಯುವನಿಧಿ ಯೋಜನೆ ( Yuvanidhi Scheme ) ಜಾರಿಗೊಳಿಸಲಾಗಿದೆ. ಡಿ.26ರಿಂದಲೇ ನೋಂದಣಿ ಆರಂಭಗೊಂಡಿದೆ. ಹೀಗೆ ಯೋಜನೆಗೆ ನೋಂದಾಯಿಸಿಕೊಂಡಂತ ಡಿಪ್ಲೋಮಾ, ಪದವೀಧರರಿಗೆ ಇನ್ನೆರಡೇ ವಾರದಲ್ಲಿ ಖಾತೆಗೆ ಹಣ ಜಮಾ ಆಗಲಿದೆ. ಆದ್ರೇ ನೀವು ಸುಳ್ಳು ಮಾಹಿತಿ ನೀಡಿದ್ರೇ ನಿಮಗೆ ನೀಡಲಾಗಿರೋ ಹಣ ವಾಪಾಸ್ ಪಡೆಯಲಾಗುತ್ತೆ. ಜೊತೆಗೆ ನಿಮ್ಮ ವಿರುದ್ಧ ಕೇಸ್ ಕೂಡ ಹಾಕಲಾಗುತ್ತದೆ.
ಹೌದು.. ಯುವನಿಧಿ ಯೋಜನೆಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. 2022-23ನೇ ಸಾಲಿನಲ್ಲಿ ಡಿಪ್ಲೋಮಾ, ಪದವಿ ಮುಗಿಸಿದ ನಂತ್ರ, ಉದ್ಯೋಗಕ್ಕೆ ಸೇರದೆ ಇರೋರು ಮಾತ್ರವೇ ಈ ಯೋಜನೆಗೆ ಅರ್ಜಿ ಸಲ್ಲಿಸೋದಕ್ಕೆ ಅವಕಾಶವಿದೆ.
ಒಂದು ವೇಳೆ ನೀವು ಡಿಪ್ಲೋಮಾ, ಪದವಿ ಮುಗಿಸುತ್ತಲೇ ಕೆಲಸಕ್ಕೆ ಸೇರಿದ್ರೂ, ನಿರುದ್ಯೋಗಿಗಳು ಅಂತ ಯುವನಿಧಿ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿ, ಪಡೆದ್ರೇ, ಆ ಬಳಿಕ ವಿಷ್ಯ ಗೊತ್ತಾದ್ರೇ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಇದಷ್ಟೇ ಅಲ್ಲದೇ ನೀವು ಉದ್ಯೋಗದಲ್ಲಿದ್ದೂ, ಯುವನಿಧಿ ಯೋಜನೆ ಹಣವನ್ನು ಪಡೆದಿದ್ರೇ ಆ ಹಣವನ್ನು ವಾಪಾಸ್ ವಸೂಲಿ ಮಾಡೋದಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಅಂತ ತಿಳಿಸಿದೆ.
ಯುವನಿಧಿ ಯೋಜನೆಯಡಿ ಡಿಪ್ಲೋಮಾದಾರರಿಗೆ 1,500 ಹಾಗೂ ಪದವೀಧರರಿಗೆ 3000 ಪ್ರತಿ ತಿಂಗಳು ನೀಡಲಾಗುತ್ತದೆ.