ನವದೆಹಲಿ: ಮೆಕ್ಕಾಗೆ ಹಜ್ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ 98 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜೈಸ್ವಾಲ್, ಕಳೆದ ವರ್ಷ ಇಡೀ ಹಜ್ ಅವಧಿಯಲ್ಲಿ ಒಟ್ಟು 187 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್ ಯಾತ್ರೆಗಾಗಿ ಮೆಕ್ಕಾಗೆ ಭೇಟಿ ನೀಡಿದ್ದಾರೆ. ಹಜ್ ಅವಧಿಯು ಮೇ 9 ರಿಂದ ಜುಲೈ 22 ರವರೆಗೆ ಇರುತ್ತದೆ. ಈ ವರ್ಷ ಇಲ್ಲಿಯವರೆಗೆ 98 ಸಾವುಗಳು ವರದಿಯಾಗಿವೆ” ಎಂದು ಅವರು ಹೇಳಿದರು.
“ನೈಸರ್ಗಿಕ ಕಾರಣಗಳು, ದೀರ್ಘಕಾಲದ ಕಾಯಿಲೆಗಳು ಮತ್ತು ವೃದ್ಧಾಪ್ಯದಿಂದಾಗಿ ಸಾವುಗಳು ಸಂಭವಿಸಿವೆ. ಅರಾಫತ್ ದಿನದಂದು ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಅಪಘಾತ ಸಂಬಂಧಿತ ಸಾವುಗಳು” ಎಂದು ತಿಳಿಸಿದ್ದಾರೆ.