ಬೆಂಗಳೂರು: ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ರಾಜ್ಯದಲ್ಲಿ ಬಳಕೆಯಲ್ಲಿರುವಂತ 9 ಇಂಜೆಕ್ಷನ್ ಗುಣಮಟ್ಟ ಹೊಂದಿಲ್ಲ ಎಂಬಂತ ಆತಂಕಕಾರಿ, ಶಾಕಿಂಗ್ ಅಂಶ ಲ್ಯಾಬ್ ವರದಿಯಿಂದ ಬಹಿರಂಗವಾಗಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗುಣಮಟ್ಟವಿಲ್ಲದ ಈ ಇಂಜೆಕ್ಷನ್ ಕೂಡಲೇ ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಅಂದಹಾಗೇ ಈ ವರ್ಷ ಜನವರಿ 1ರಿದಂ ಫೆಬ್ರವರಿ 16ರ ನಡುವೆ ಹೊರ ರಾಜ್ಯಗಳಲ್ಲಿ ತಯಾರಾಗಿ ಕರ್ನಾಟಕಕ್ಕೆ ಪೂರೈಕೆಯಾಗಿರುವ ಔಷಧಗಳ 9 ಇಂಜೆಕ್ಷನ್ ಯೋಗ್ಯವಲ್ಲ ಎಂದು ರಾಜ್ಯ ಸರ್ಕಾರದ ಪ್ರಯೋಗಾಲಯಗಳಲ್ಲಿ ನಡೆದ ಗುಣಮಟ್ಟ ಪರೀಕ್ಷೆ ವರದಿಯಲ್ಲಿ ಸಾಬೀತಾಗಿದೆ.
ಯಾವೆಲ್ಲ ಔಷದಗಳು ಕಳಪೆ?
ಕಳಪೆ ಗುಣಮಟ್ಟದ 9 ಇಂಜೆಕ್ಷನ್ ಗಳ ಪೈಕಿ ಎರಡು ಬ್ಯಾಚ್ ನ ಇಂಜೆಕ್ಷನ್ ಗಳು ಆಂಟಿ ಬಯೋಟಿಕ್ ಆಗಿದ್ದು ವಾಂತಿ, ಬೇಧಿ ಸಂದರ್ಭದಲ್ಲಿ ನೀಡಲಾಗುತ್ತದೆ. ಇವಲ್ಲದೇ ನೋವು ನಿವಾರಕವಾಗಿ, ಬಳಲಿಕೆ ಮತ್ತು ನಿಶ್ಯಕ್ತಿಗೆ, ಕಿಡ್ನಿ ಸಮಸ್ಯೆ ಹೊಂದಿದವರಿಗೆ, ಹಾವು ಕಡಿತ, ವಿಷ ಸೇವನೆ ಸಂದರ್ಭದಲ್ಲಿ ನೀಡುವ ಇಂಜೆಕ್ಷನ್ ಗಳು ಕಳಪೆಯಾಗಿದ್ದಾವೆ.
BREAKING: ಸ್ನೇಹಮಯಿ ಕೃಷ್ಣ ಮೇಲೆ ವಾಮಾಚಾರ ಕೇಸ್: ಇಬ್ಬರು ಆರೋಪಿಗಳು ಅರೆಸ್ಟ್
ರಾಜ್ಯ ಸರ್ಕಾರದಿಂದ ‘KPSC ಪರೀಕ್ಷಾ ಅಕ್ರಮ’ ತಡೆಗೆ ಮಹತ್ವದ ಕ್ರಮ: ‘ನೀಲಿ ಪೆನ್’ ನಿಯಮ ಜಾರಿ