ಉಡುಪಿ: ಜಿಲ್ಲೆಯಲ್ಲಿ ದೋಣಿ ಮುಳುಗಿದ್ದರಿಂದ ಲೈಫ್ ಜಾಕೆಟ್ ಧರಿಸಿ, ಸಮುದ್ರಕ್ಕೆ ಹಾರಿದ್ದರಿಂದ 9 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿಯ ಉಪ್ಪಂದದ ಮೆಡಿಕಲ್ ಬಳಿಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮುಳುಗಡೆಯಾಗಿತ್ತು. ಈ ವೇಳೆ ಲೈಫ್ ಜಾಕೆ ಧರಿಸಿ ಸಮುದ್ರಕ್ಕೆ 9 ಮೀನುಗಾರರು ಹಾರಿದರು. ಹೀಗಾಗಿ ಲೈಫ್ ಜಾಕೆಟ್ ಧರಿಸಿದ್ದರಿಂದ 9 ಮೀನುಗಾರರು ಬದುಕುಳಿದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಉಪ್ಪಂದದ ಮೆಡಿಕಲ್ ಬಳಿಯಲ್ಲಿ ಈ ಘಟನೆ ನಡೆದಿದೆ. ಲೈಫ್ ಜಾಕೆಟ್ ಧರಿಸಿದ್ದರಿಂದ 9 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ದೋಣಿ ದುರಂತದಲ್ಲಿ ಮೂವರು ಮೀನುಗಾರರು ಬಲಿಯಾಗಿದ್ದರು. ತಪ್ಪದೇ ಲೈಫ್ ಜಾಕೆಟ್ ಧರಿಸುವಂತೆ ಜಿಲ್ಲಾಡಳಿತ ಹೇಳುತ್ತಿತ್ತು. ಹೀಗೆ ಲೈಫ್ ಜಾಕೆಟ್ ಧರಿಸಿದ್ದರಿಂದ ದೋಣಿ ಮುಳುಗಿದರೂ 9 ಮೀನುಗಾರರು ಬದುಕುಳಿಯುವಂತೆ ಆಗಿದೆ.
ವಿದ್ಯಾರ್ಥಿಗಳು ಪದವಿಗಳಿಗಷ್ಟೇ ಸೀಮಿತವಾಗದೇ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಿ: ಸಂಸದ ಸಿ.ಎನ್.ಮಂಜುನಾಥ್
BIG NEWS: ರಾಜ್ಯ ಸರ್ಕಾರದಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ‘ಲೈಂಗಿಕ ಕಿರುಕುಳ ತಡೆ’ಗೆ ಮಹತ್ವದ ಕ್ರಮ