ನವದೆಹಲಿ : ನಿಯಂತ್ರಕ ಕ್ರಮಗಳಿಂದಾಗಿ ಶೇಕಡಾ 80-85ರಷ್ಟು ಪೇಟಿಎಂ ವಾಲೆಟ್ ಬಳಕೆದಾರರು ಯಾವುದೇ ಅಡೆತಡೆಗಳನ್ನ ಎದುರಿಸುವುದಿಲ್ಲ ಮತ್ತು ಉಳಿದ ಬಳಕೆದಾರರಿಗೆ ತಮ್ಮ ಅಪ್ಲಿಕೇಶನ್ಗಳನ್ನ ಇತರ ಬ್ಯಾಂಕುಗಳಿಗೆ ಲಿಂಕ್ ಮಾಡಲು ಸೂಚಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹೇಳಿದ್ದಾರೆ.
ಜನವರಿ 31 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL)ನ್ನ ಯಾವುದೇ ಗ್ರಾಹಕರ ಖಾತೆಗಳಲ್ಲಿ ಠೇವಣಿ, ಕ್ರೆಡಿಟ್ ವಹಿವಾಟು ಅಥವಾ ಟಾಪ್-ಅಪ್ಗಳನ್ನು ಸ್ವೀಕರಿಸದಂತೆ ನಿಷೇಧಿಸಿದೆ.
PPBL’ನೊಂದಿಗೆ ಲಗತ್ತಿಸಲಾದ ವ್ಯಾಲೆಟ್’ನ್ನ ಇತರ ಬ್ಯಾಂಕುಗಳೊಂದಿಗೆ ಲಿಂಕ್ ಮಾಡುವ ಗಡುವನ್ನ ಮಾರ್ಚ್ 15 ಕ್ಕೆ ನಿಗದಿಪಡಿಸಲಾಗಿದೆ ಎಂದು ಗವರ್ನರ್ ಹೇಳಿದರು.
ಮಾರ್ಚ್ 15 ರವರೆಗೆ ನೀಡಲಾದ ಸಮಯ ಸಾಕು ಮತ್ತು ಹೆಚ್ಚಿನ ವಿಸ್ತರಣೆಯ ಅಗತ್ಯವಿಲ್ಲ. ಶೇಕಡಾ 80-85 ರಷ್ಟು ಪೇಟಿಎಂ ವ್ಯಾಲೆಟ್ಗಳು ಇತರ ಬ್ಯಾಂಕುಗಳೊಂದಿಗೆ ಸಂಪರ್ಕ ಹೊಂದಿವೆ ಮತ್ತು ಉಳಿದ 15 ಪ್ರತಿಶತದಷ್ಟು ಇತರ ಬ್ಯಾಂಕುಗಳಿಗೆ ಹೋಗಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
‘ನಾಳೆ ಮೋದಿ ರ್ಯಾಲಿಗೆ ಹೋಗಬೇಡಿ’ : ಕಾಶ್ಮೀರಿಗಳಿಗೆ ‘ಅಂತಾರಾಷ್ಟ್ರೀಯ ಸಂಖ್ಯೆ’ಗಳಿಂದ ಬೆದರಿಕೆ ಕರೆ, ‘ISI’ ಶಂಕೆ
Chakshu Portal : ಯಾವುದೇ ‘ಕರೆ, ಸಂದೇಶ ಮತ್ತು ವಂಚನೆ’ ಕುರಿತು ದೂರು ನೀಡುವುದು ಹೇಗೆ.? ಪೂರ್ಣ ಪ್ರಕ್ರಿಯೆ ಇಲ್ಲಿದೆ