Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಂದೇ ಭಾರತ್’ನಲ್ಲಿ ಕಳಪೆ ಆಹಾರ ನೀಡಿದ ‘IRCTC’ಗೆ ಬಿಗ್ ಶಾಕ್ ; 10 ಲಕ್ಷ ರೂ. ದಂಡ ವಿಧಿಸಿ ಭಾರತೀಯ ರೈಲ್ವೆ ಆದೇಶ

25/03/2026 10:23 PM

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು

25/03/2026 10:02 PM

‘ನಮ್ಮದು ಪಾಕಿಸ್ತಾನದಂತೆ ‘ದಲ್ಲಾಳಿ’ ದೇಶವಲ್ಲ’ ; ಸರ್ವಪಕ್ಷ ಸಭೆಯಲ್ಲಿ ‘ಜೈಶಂಕರ್’ ಹೀಗೆ ಹೇಳಿದ್ಹೇಕೆ.?

25/03/2026 9:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕ ಬಜೆಟ್ 2026-27: ಗೃಹಲಕ್ಷ್ಮಿಗೆ ಆನೆ ಬಲ; ಪ್ರವಾಸೋದ್ಯಮ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ!
Uncategorized

ಕರ್ನಾಟಕ ಬಜೆಟ್ 2026-27: ಗೃಹಲಕ್ಷ್ಮಿಗೆ ಆನೆ ಬಲ; ಪ್ರವಾಸೋದ್ಯಮ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ!

By kannadanewsnow0706/03/2026 10:53 AM
Budget (2)
Budget (2)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬೆನ್ನಲ್ಲೇ, ಈ ಬಾರಿಯೂ ಬಜೆಟ್‌ನಲ್ಲಿ ಜನಸಾಮಾನ್ಯರ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಮೀಸಲು
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶಕ್ತಿ ತುಂಬಿರುವ ‘ಗೃಹಲಕ್ಷ್ಮಿ’ ಯೋಜನೆಗೆ ಈ ವರ್ಷ ಬರೋಬ್ಬರಿ 28,608 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. “ಗ್ಯಾರಂಟಿ ಯೋಜನೆಗಳ ಮೂಲಕ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಹೆಚ್ಚು ಹಾಲು ಕೊಡುವ ಹಸುಗಳನ್ನು ಹೇಗೆ ಚೆನ್ನಾಗಿ ಆರೈಕೆ ಮಾಡುತ್ತೇವೆಯೋ, ಹಾಗೆಯೇ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ರಾಜ್ಯವನ್ನು ಒಕ್ಕೂಟ ಸರ್ಕಾರವೂ ಸಂವೇದನಾಶೀಲತೆಯಿಂದ ನೋಡಬೇಕು,” ಎಂದು ಸಿಎಂ ಮಾರ್ಮಿಕವಾಗಿ ನುಡಿದರು.

ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಹೊಸ ರೂಪ
ಕಾರ್ಮಿಕರ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.

ಶ್ರಮಿಕ ಶಾಲೆಗಳು: ಕಾರ್ಮಿಕರ ಮಕ್ಕಳಿಗಾಗಿ ಹೊಸದಾಗಿ 62 ವಸತಿ ಶ್ರಮಿಕ ಶಾಲೆಗಳನ್ನು ಆರಂಭಿಸಲಾಗುವುದು. ಒಟ್ಟಾರೆಯಾಗಿ 104 ಶಾಲೆಗಳ ಆರಂಭಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

GTTC ಕೇಂದ್ರಗಳು: 60 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 10 GTTC (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಕೌಶಲ್ಯ ಅಕಾಡೆಮಿ: ಹುಬ್ಬಳ್ಳಿ-ಧಾರವಾಡದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆಯಾಗಲಿದೆ.

ಪ್ಯಾರಾ ಮೆಡಿಕಲ್ ಕೋರ್ಸ್: ಮೈಸೂರು, ದೊಡ್ಡಬಳ್ಳಾಪುರ, ಇಂದಿರಾನಗರ ಮತ್ತು ಹುಬ್ಬಳ್ಳಿಯ ಕಾರ್ಮಿಕರ ವಿಮಾ ಸೊಸೈಟಿಗಳ ಮೂಲಕ ಪ್ಯಾರಾ ಮೆಡಿಕಲ್ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಪ್ರವಾಸೋದ್ಯಮಕ್ಕೆ ಬೂಸ್ಟ್: ಮುಳ್ಳಯ್ಯನಗಿರಿಯಲ್ಲಿ ರೋಪ್‌ವೇ
ಪ್ರವಾಸಿಗರ ಆಕರ್ಷಣೀಯ ಕೇಂದ್ರವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ – ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್‌ವೇ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಇದನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (PPP Model) ಅಭಿವೃದ್ಧಿಪಡಿಸಲಾಗುವುದು. ಇದರಿಂದ ಮಲೆನಾಡಿನ ಪ್ರವಾಸೋದ್ಯಮಕ್ಕೆ ಹೊಸ ಕಳೆ ಬರಲಿದೆ.

ಸಾಹಿತ್ಯ ಮತ್ತು ಸಂಸ್ಕೃತಿ
ಖ್ಯಾತ ಸಾಹಿತಿ ಯು.ಆರ್. ಅನಂತಮೂರ್ತಿ ಅವರ ನೆನಪಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಯು.ಆರ್. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಿಸಿದರು.

ಆದಾಯ ಗುರಿ ಮತ್ತು ರಾಜ್ಯದ ಸಾಲದ ಸ್ಥಿತಿ
ಬಜೆಟ್ ಮಂಡನೆ ವೇಳೆ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆಯೂ ಮಾಹಿತಿ ನೀಡಿದ ಸಿಎಂ, ವಿವಿಧ ಇಲಾಖೆಗಳಿಗೆ ಕಟ್ಟುನಿಟ್ಟಿನ ರಾಜಸ್ವ ಗುರಿ ನೀಡಿದ್ದಾರೆ:

ಅಬಕಾರಿ ಇಲಾಖೆ: 45,000 ಕೋಟಿ ರೂ.

ನೊಂದಣಿ ಮತ್ತು ಮುದ್ರಾಂಕ: 29,000 ಕೋಟಿ ರೂ.

ಸಾರಿಗೆ ಇಲಾಖೆ: 15,500 ಕೋಟಿ ರೂ.

ಗಣಿಗಾರಿಕೆ: 11,000 ಕೋಟಿ ರೂ. (ಶುಲ್ಕ ಅಂದಾಜು)

ಇದೇ ವೇಳೆ ಕರ್ನಾಟಕದ ಒಟ್ಟು ಸಾಲ 8,24,389 ಕೋಟಿ ರೂ. ಇದೆ ಎಂದು ಸಿಎಂ ಮಾಹಿತಿ ನೀಡಿದರು. ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

Share. Facebook Twitter LinkedIn WhatsApp Email

Related Posts

​ತೈಲ ಉಳಿಸಲು ಶ್ರೀಲಂಕಾ ಮಾಸ್ಟರ್ ಪ್ಲಾನ್: ಇನ್ನು ಮುಂದೆ ಪ್ರತಿ ಬುಧವಾರ ಸರ್ಕಾರಿ ರಜೆ ಘೋಷಣೆ!

17/03/2026 10:49 AM1 Min Read

ALERT : ಅಪ್ಪಿ ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ !

15/03/2026 12:31 PM2 Mins Read

‘ಭಾರತೀಯರ ಸುರಕ್ಷತೆಯೇ ನಮಗೆ ಮೊದಲು’: ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ; ಸಂಘರ್ಷದ ಬಗ್ಗೆ ತೀವ್ರ ಕಳವಳ!

13/03/2026 7:08 AM1 Min Read
Recent News

BREAKING : ವಂದೇ ಭಾರತ್’ನಲ್ಲಿ ಕಳಪೆ ಆಹಾರ ನೀಡಿದ ‘IRCTC’ಗೆ ಬಿಗ್ ಶಾಕ್ ; 10 ಲಕ್ಷ ರೂ. ದಂಡ ವಿಧಿಸಿ ಭಾರತೀಯ ರೈಲ್ವೆ ಆದೇಶ

25/03/2026 10:23 PM

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು

25/03/2026 10:02 PM

‘ನಮ್ಮದು ಪಾಕಿಸ್ತಾನದಂತೆ ‘ದಲ್ಲಾಳಿ’ ದೇಶವಲ್ಲ’ ; ಸರ್ವಪಕ್ಷ ಸಭೆಯಲ್ಲಿ ‘ಜೈಶಂಕರ್’ ಹೀಗೆ ಹೇಳಿದ್ಹೇಕೆ.?

25/03/2026 9:23 PM

BREAKING : ದೊಡ್ಡಣ್ಣನ ಆರ್ಡರ್’ಗೆ ಡೋಂಟ್ ಕೇರ್ ; ‘ಈ 5 ಷರತ್ತು ಒಪ್ಪಿದ್ರೆ ಮಾತ್ರ ಯುದ್ಧ ಅಂತ್ಯ’ ಎಂದ ಇರಾನ್!

25/03/2026 9:11 PM
State News
KARNATAKA

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಸರಕಾರದ ಅಸ್ತು

By kannadanewsnow0925/03/2026 10:02 PM KARNATAKA 1 Min Read

ನವದೆಹಲಿ: ರಾಜ್ಯದ ಪ್ರಾದೇಶಿಕ ರೈಲು ಸಂಪರ್ಕಕ್ಕೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಮೈಸೂರು-ಕೆಎಸ್ಆರ್ ಬೆಂಗಳೂರು ನಡುವೆ ನಿತ್ಯವು ಸಂಚರಿಸಲಿರುವ ಒಡೆಯರ್…

ಸಾಗರದ ‘RCB ಫ್ಯಾನ್ಸ್‌’ಗೆ ಶಾಸಕ ಬೇಳೂರು ‘ಬೌಂಡರಿ’ ಗಿಫ್ಟ್: ಪ್ರತಿ ‘RCB ಪಂದ್ಯ’ ವೀಕ್ಷಣೆಗೂ ‘ಎಲ್ಇಡಿ’ ವ್ಯವಸ್ಥೆ, ಲೈವ್ ಕ್ರೇಜ್!

25/03/2026 8:46 PM

ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣದ ಹೆಸರಲ್ಲಿ ಪ್ರಾಣದ ಜೊತೆ ಚೆಲ್ಲಾಟ: ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ

25/03/2026 8:32 PM

ALERT : `ಸೆಕ್ಸ್’ ಬಳಿಕ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಲೇಬೇಡಿ !

25/03/2026 8:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.