ಬೆಂಗಳೂರು: ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) ಪಾಸಿಟಿವ್ ಬಂದಿದ್ದು, ಚೀನಾದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಇದು ಭಾರತದಲ್ಲಿ ಮೊದಲ ಪ್ರಕರಣವಾಗಿದೆ
ಮಗು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು.ವಿವರಗಳ ಪ್ರಕಾರ, ಮಗುವಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ.
ಈ ಪ್ರಕರಣವನ್ನು ಕರ್ನಾಟಕ ಆರೋಗ್ಯ ಇಲಾಖೆ ದೃಢಪಡಿಸಿದ್ದು, ಮಗುವಿನ ವೈದ್ಯಕೀಯ ಪರೀಕ್ಷೆಗಳು ಪಾಸಿಟಿವ್ ಎಂದು ತಿಳಿದುಬಂದಿದೆ.
ಈ ಪ್ರಕರಣವನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ