ಹುಬ್ಬಳ್ಳಿ: ಹೊಟ್ಟೆಯಲ್ಲೇ 8 ತಿಂಗಳ ಗರ್ಭಿಣಿಯಾಗಿದ್ದಂತ ಬಾಣಂತಿಯ ಮಗು ಸಾವನ್ನಪ್ಪಿತ್ತು. ಈ ಸುದ್ದಿಯನ್ನು ಕೇಳಿದಂತೆ ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
6 ಬಾರಿ ಫಿಟ್ಸ್ ಗೆ ತುತ್ತಾಗಿದ್ದಂತ ಗರ್ಭಿಣಿ ರಾಧಿಕಾ ಎಂಬುವರಿಗೆ ತುರ್ತು ಚಿಕಿತ್ಸೆ ಸಿಗದೇ ಹೊಟ್ಟೆಯಲ್ಲೇ 8 ತಿಂಗಳ ಮಗು ಸಾವನ್ನಪ್ಪಿತ್ತು. ಅವರನ್ನು ಕಿಮ್ಸ್ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ್ದ ಕಾರಣ, ಗಂಭೀರಗೊಂಡಿತ್ತು. ಆದರೇ ಚಿಕಿತ್ಸೆ ಫಲಿಸದೇ ರಾಧಿಕಾ ಸಾವನ್ನಪ್ಪಿದ್ದರು.
ಪತ್ನಿ ಸಾವಿನ ಸುದ್ದಿಯನ್ನು ಕೇಳಿದಂತ ರಾಧಿಕಾ ಪತಿ ಮಲ್ಲೇಶ್ (25) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರಿನ ವಿಕಲಚೇತನರ ಗಮನಕ್ಕೆ: ರಿಯಾಯಿತಿದರದ BMTC ಬಸ್ ಪಾಸ್ ವಿತರಣೆ, ನವೀಕರಣಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಬಂದೋಬಸ್ತ್, ಎಲ್ಲೆಲ್ಲೂ ಕಟ್ಟೆಚ್ಚರ: ಎಸ್ಪಿ ಮಿಥುನ್ ಕುಮಾರ್