ಬೆಂಗಳೂರು: ಇಂದು ಐತಿಹಾಸಿಕ ಬೆಂಗಳೂರು ದ್ರೌಪದಮ್ಮ ಕರಗ ಶಕ್ತ್ಯೋತ್ಸವ ಮಧ್ಯರಾತ್ರಿ ನಡೆಯಲಿದೆ. ಇದಕ್ಕಾಗಿ ತಿಗಳರಪೇಟೆ, ಚಿಕ್ಕಪೇಟೆ, ಕಾರ್ಪೋರೇಷನ್ ಸೇರಿದಂತೆ ಹಳಏ ಬೆಂಗಳೂರು ಪ್ರದೇಶವನ್ನು ಸಿಂಗಾರಗೊಳಿಸಲಾಗಿದೆ.
ಪ್ರತಿ ವರ್ಷ ಚೈತ್ರ ಮಾಸದಂದು ನಡೆಯಲಿರುವಂ ಬೆಂಗಳೂರು ಕರಗ ಶಕ್ತ್ಯೋತ್ಸವವು ಮಂಗಳವಾರ ಮಧ್ಯರಾತ್ರಿ 12.30ರಿಂದ ಆರಂಭಗೊಳ್ಳಲಿದೆ. ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಕರಗ ಮೆರವಣಿಗೆ, ನಗರದ ವಿವಿಧ ಬಡಾವಣೆಗಳಿಗೆ ತೆರಳಿ, ಬುಧವಾರ ಮುಂಜಾನೆ ವಾಪಾಸ್ಸು ಧರ್ಮರಾಯನ ಸ್ವಾಮಿ ದೇವಸ್ಥಾನಕ್ಕೆ ಬಂದು ಸೇರಲಿದೆ.
ಕರಗೋತ್ಸವಕ್ಕಾಗಿ ಕರಗ ವ್ಯವಸ್ಥಾಪನಾ ಸಮಿತಿ, ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯ ಕರಗಕ್ಕೆ 8 ಲಕ್ಷಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಳ್ಳೋ ನಿರೀಕ್ಷೆಯಿದೆ.
ಹೀಗಿದೆ ಕರಗ ಸಾಗುವ ಮಾರ್ಗ
ಮೊದಲಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಪ್ರದಕ್ಷಿಣೆ ಹಾಕಿ, ದ್ರೌಪದಮ್ಮ ಕರಗ ಹೊರಡಲಿದೆ. ಅಲ್ಲಿಂದ ಕುಂಬಾರಪೇಟೆ ರಸ್ತೆ ಮೂಲಕ ಸಾಗಿ, ರಾಜ ಮಾರುಕಟ್ಟೆ ವೃತ್ತ, ಕೆ ಆರ್ ಮಾರುಕಟ್ಟೆ ವೃತ್ತದ ಮೂಲಕ ಸಾಗಲಿದೆ.
ನಂತ್ರ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ, ಪೂಜೆ ಸ್ವೀಕರಿಸಲಿದೆ. ಅಲ್ಲಿಂದ ವಾಪಾಸಾಗಿ ಕಾಟನ್ ಪೇಟೆ ಪೊಲೀಸ್ ಠಾಣೆ ರಸ್ತೆಯಲ್ಲಿ ಸಾಗಿ, ಅಲ್ಲಿನ ಮಸ್ತಾನ್ ಸಾಬ್ ದರ್ಗಾಕಕ್ಕೆ ತೆರಳಿ ಪೂಜೆ ಸ್ವೀಕರಿಸಿ, ಬಳೇ ಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಮುಂಜಾನೆ ವಾಪಾಸ್ಸು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಮರಳಿ ಸೇರಲಿದೆ.
ಚುನಾವಣಾ ಕರ್ತವ್ಯ ನಿರತರಿಗೆ ಮಹತ್ವದ ಮಾಹಿತಿ: ಏ.25ರವರೆಗೆ ಮತದಾನ ಸೌಲಭ್ಯ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು ಅವಕಾಶ
ಮತದಾರರ ಗಮನಕ್ಕೆ : ಮೊಬೈಲ್ ನಲ್ಲೇ ‘ವೋಟರ್ ಸ್ಲಿಪ್’ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ