ಬೆಂಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಕೆ ಕೆ ಮಂಜುನಾಥ್ ಕಣಕ್ಕೆ ಇಳಿದಿದ್ದಾರೆ. ಅವರು ಹಳೆ ಪಿಂಚಣಿ ಯೋಜನೆ, 7ನೇ ವೇತನ ಆಯೋಗದಂತೆ ವೇತನ ಜಾರಿಗೊಳಿಸೋದಾಗಿ ಭರವಸೆ ನೀಡಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಗಾಗಿ ಚುನಾವಣಾ ಪ್ರಣಾಳಿಕೆಯ ಆಶಯ ಬಿಡುಗಡೆ ಮಾಡಿರುವಂತ ಅವರು, ಅದರಲ್ಲಿ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡಲಾಗುವುದು. 7ನೇ ವೇತನ ಆಯೋಗದಂತೆ ವೇತನವನ್ನು ಜಾರಿಗೊಳಿಸೋದಾಗಿ ಘೋಷಿಸಿದ್ದಾರೆ.
ಅತಿಥಿ ಶಿಕ್ಷಕರ ಸೇವಾ ಭದ್ರತೆ, ಸೇವೆಯನ್ನು ಖಾಯಂಗೊಳಿಸೋದಕ್ಕೆ ಪ್ರಯತ್ನಿಸುತ್ತೇನೆ. ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಸಂಸ್ಥೆಗಳ ನವೀಕರಣಕ್ಕೆ ತಾವು ಗೆಲುವು ಸಾಧಿಸಿದ್ರೇ ಕ್ರಮವಹಿಸೋದಾಗಿ ತಿಳಿಸಿದ್ದಾರೆ.
ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಸೌಲಭ್ಯ ಜಾರಿಗೊಳಿಸೋ ಭರವಸೆಯನ್ನು ನೀಡಿದ್ದಾರೆ. ಜೊತೆಗೆ ಪದವಿ ಪೂರ್ವದಲ್ಲಿ ಜಾರಿಯಲ್ಲಿರುವ 3 ವಾರ್ಷಿಕ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.
8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸುತ್ತೇನೆ. 1995ರ ನಂತ್ರದಲ್ಲಿ ಸ್ಥಾಪನೆಯಾಗಿರುವ ಖಾಸಗಿ ಶಾಲಾ-ಕಾಲೇಜಗಳನ್ನು ವೇತನ ಅನುದಾನಕ್ಕೆ ಒಳಪಡಿಸಲು ಕ್ರಮವಹಿಸುತ್ತೇನೆ. ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತಮ್ಮನ್ನು ಗೆಲ್ಲಿಸುವಂತೆ ಡಾ.ಕೆ.ಕೆ ಮಂಜುನಾಥ್ ಕುಮಾರ್ ಕೋರಿದ್ದಾರೆ.
Watch Video: ‘ಪೊಲೀಸ್ ಠಾಣೆ’ ಏನು ನಿಮ್ಮಪ್ಪಂದಾ.?: ‘PSI’ಗೆ ‘BJP ಶಾಸಕ ಹರೀಶ್ ಪೂಂಜಾ’ ಧಮ್ಕಿ
Bengaluru Rain: ಬೆಂಗಳೂರಿನಲ್ಲಿ ಧಾರಾಕಾರ ಮಳೆ: ರಸ್ತೆಗಳಲ್ಲಿ ಹರಿದ ನೀರು, ವಾಹನ ಸವಾರರು ಪರದಾಟ