ಬೆಂಗಳೂರು: ಇಂದು ಬೆಂಗಳೂರಿನ ಕೆ ಎಸ್ ಆ ಟಿ ಸಿ ಕೇಂದ್ರ ಕಛೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕೆ ಎಸ್ ಆರ್ ಟಿ ಸಿ ಎಂಡಿ ಅಕ್ರಂ ಪಾಷ ಧ್ವಜಾರೋಹಣ ನೆರವೇರಿಸುವ ಮೂಲಕ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ , ಬಾಬಾ ಸಾಹೇಬ್ ಅಂಬೇಡ್ಕರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮಾತನಾಡುತ್ತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರುಗಳು ಅವರ ತ್ಯಾಗ ,ಬಲಿದಾನ ಫಲವಾಗಿ ಇಂದು ದೇಶವು ಸ್ವಾತಂತ್ರ್ಯ ಪಡೆದ 79 ವರುಷಗಳಲ್ಲಿ ಮಹತ್ತರವಾದ ಅಭಿವೃದ್ಧಿಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಕಂಡಿದೆ. ಸಂವಿಧಾನ ಸಂಪೂರ್ಣ ಪೀಠೀಕೆಯನ್ನು ಪಠಿಸಿದ ವ್ಯವಸ್ಥಾಪಕ ನಿರ್ದೇಶಕರು ಸಂವಿಧಾನದ ಸಾರಾಂಶವು ಸಾರ್ವಭೌಮತ್ವ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಸಮಾಜವಾದ, ಗಣತಂತ್ರ, ಭ್ರಾತೃತ್ವ, ಸಮಾನತೆ, ನ್ಯಾಯವನ್ನು ಒಳಗೊಂಡಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕು ಸಂಸ್ಥೆಯನ್ನು ಸಹ ಉತ್ತುಂಗಕ್ಕೆ ಕೊಂಡೊಯ್ಯಲು ನಾವೆಲ್ಲರೂ ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ನಂದಿನಿದೇವಿ.ಕೆ ಭಾಆಸೇ, ನಿರ್ದೇಶಕರು (ಸಿಬ್ಬಂದಿ & ಜಾಗೃತ), ಇಬ್ರಾಹಿಂ ಮೈಗೂರ , ಭಾಆಸೇ, ನಿರ್ದೇಶಕರು ( ಮಾಹಿತಿ & ತಂತ್ರಜ್ಞಾನ) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.