ಕೆಎನ್ಎನ್‍ಡಿಜಿಟಲ್ ಡೆಸ್ಕ್ : 2025ರ ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, 71 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ ಹೆಚ್ಚಿನ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರ ಹೆಸರುಗಳೂ ಸೇರಿವೆ.
ತಾರಾಪುರ ವಿಧಾನಸಭಾ ಸ್ಥಾನದಿಂದ ಸಾಮ್ರಾಟ್ ಚೌಧರಿ ಮತ್ತು ಲಖಿಸರಾಯ್ ವಿಧಾನಸಭಾ ಸ್ಥಾನದಿಂದ ವಿಜಯ್ ಕುಮಾರ್ ಸಿನ್ಹಾ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಮಾಜಿ ಸಂಸದ ಮತ್ತು ಕೇಂದ್ರ ಸಚಿವ ರಾಮಕೃಪಾಲ್ ಯಾದವ್ ಅವರನ್ನ ದಾನಾಪುರದಿಂದ ಕಣಕ್ಕಿಳಿಸಲಾಗಿದೆ. ಸಿವಾನ್’ನಿಂದ ಮಂಗಲ್ ಪಾಂಡೆ, ಹಾಜಿಪುರದಿಂದ ಅವಧೇಶ್ ಸಿಂಗ್, ಬಂಕಿಪುರದಿಂದ ನಿತಿನ್ ನವೀನ್, ಹಿಸುವಾದಿಂದ ಅನಿಲ್ ಸಿಂಗ್, ಪಟೇಪುರದಿಂದ ಲಖೀಂದ್ರ ಪಾಸ್ವಾನ್, ಔರಂಗಾಬಾದ್‌ನಿಂದ ತ್ರಿವಿಕ್ರಮ್ ನಾರಾಯಣ್ ಸಿಂಗ್ ಮತ್ತು ಛತ್ತಾಪುರದಿಂದ ನೀರಜ್ ಬಬ್ಲು ಅವರನ್ನು ಕಣಕ್ಕಿಳಿಸಲಾಗಿದೆ.
BREAKING : ಡಿಸೆಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ : ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
BIG NEWS : ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ವಿಚಾರ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
BIG NEWS : ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ವಿಚಾರ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?