ಬೆಂಗಳೂರು: ಪ್ರೇಮಿಸಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿದಂತ ಆರೋಪಿ ನಾಗೇಶ್ ವಿರುದ್ಧ, ಇದೀಗ ಪೊಲೀಸರು ನ್ಯಾಯಾಲಯಕ್ಕೆ 754 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

BIG NEWS: ಇಂದು ಬಿಹಾರದಲ್ಲಿ ‘ಮಹಾಘಟಬಂಧನ್-2’ ಅಸ್ಥಿತ್ವಕ್ಕೆ: ನಿತೀಶ್ ಕುಮಾರ್ ಸಿಎಂ, ತೇಜಸ್ವಿಯಾದವ್ ಡಿಸಿಎಂ ಆಗಿ ಪ್ರಮಾಣವಚನ | Bihar Political Crisis

ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣ ಸಂಬಂಧ ಬಂಧಿತ ಆರೋಪಿ ನಾಗೇಶ್ ವಿರುದ್ಧ 39ನೇ ಎಸಿಎಂಎಂ ನ್ಯಾಯಾಲಯಕ್ಕೆ ತಮ್ಮ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ.

ನ್ಯಾಯಾಲಯದ ನಿಲುವು ತಪ್ಪಾಗದ ಹೊರತು ‘ಖುಲಾಸೆ ತೀರ್ಪಿ’ನಲ್ಲಿ ಹಸ್ತಕ್ಷೇಪ ಸರಿಯಲ್ಲ ; ಸುಪ್ರೀಂಕೋರ್ಟ್

ಅಂದಹಾಗೇ ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್ ನಿವಾಸಿಯಾಗಿದ್ದಂತ ಆರೋಪಿ ನಾಗೇಶ್, ಏಪ್ರಿಲ್ 28, 2022ರಂದು ಪ್ರೀತಿಸಲು ನಿರಾಕರಿಸಿದ ಕಾರಮ, ಕಾಮಾಕ್ಷಿಪಾಳ್ಯದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದನು. ಈ ಕೃತ್ಯದಲ್ಲಿ ಗಾಯಗೊಂಡಿದ್ದ ಯುವತಿ, ಈಗ ಚೇತರಿಸಿಕೊಳ್ಳುತ್ತಿದ್ದಾಳೆ. ಇದೇ ಪ್ರಕರಣದಲ್ಲಿ ಪೊಲೀಸರು ಆರೋಪಿ ನಾಗೇಶ್ ವಿರುದ್ಧ 754 ಪುಟಗಳ ಆರೋಪ ಪಟ್ಟಿಯನ್ನು 94 ಸಾಕ್ಷಿಗಳು, ವೈದ್ಯಕೀಯ ದಾಖಲೆಗಳ ಆಧಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Share.
Exit mobile version