ಬೆಂಗಳೂರು: ರಾಜ್ಯದಲ್ಲೇ ಬೆಚ್ಚಿ ಬೀಳಿಸೋ ಮಂಡ್ಯದ ಭ್ರೂಣ ಹತ್ಯೆ ಪ್ರಕರಣದ ನಂತ್ರ, ನೆಲಮಂಗಲದಲ್ಲೂ 74 ಭ್ರೂಣ ಹತ್ಯೆ ಪ್ರಕರಣ ಪತ್ತೆಯಾಗಿತ್ತು. ನೆಲಮಂಗಲ ನಗರದ ಆಸರೆ ಆಸ್ಪತ್ರೆಯಲ್ಲಿ 74 ಭ್ರೂಣ ಹತ್ಯೆಯನ್ನು ಮಾಡಿರೋದಾಗಿ ತಿಳಿದು ಬಂದ ಕಾರಣ ಆಸ್ಪತ್ರೆಯ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಆಸರೆ ಆಸ್ಪತ್ರೆಯ ಮಾಲೀಕ ಡಾ.ರವಿಕುಮಾರ್ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿರುವಂತ ಆಸರೆ ಆಸ್ಪತ್ರೆಯಲ್ಲಿ 74 ಹೆಣ್ಣು ಭ್ರೂಣ ಹತ್ಯೆ ಮಾಡಿರುವಂತ ಶಾಕಿಂಗ್ ಮಾಹಿತಿ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿಯ ನಂತ್ರ ಪತ್ತೆಯಾಗಿದೆ. ಆಸರೆ ಆಸ್ಪತ್ರೆಯ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಈ ಆಘಾತಕಾರಿ ವಿಷಯವನ್ನು ಬೆಳಕಿಗೆ ತಂದಿದ್ದಾರೆ.
ನೆಲಮಂಗಲದ ಆಸರೆ ಆಸ್ಪತ್ರೆಯ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ 74 ಭ್ರೂಣ ಲಿಂಗ ಪತ್ತೆ ಪ್ರಕರಣವನ್ನು ಪತ್ತೆ ಹಚ್ಚುತ್ತಿದ್ದಂತೇ, ಆಸ್ಪತ್ರೆಯ ಮಾಲೀಕ ಡಾ.ರವಿಕುಮಾರ್ ಅವರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
BIG NEWS: ‘ರಾಜ್ಯ ಸರ್ಕಾರ’ದಿಂದ ‘ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆ’ಗಳಿಗೆ ಬಂಫರ್ ಗಿಫ್ಟ್: ‘ಅನುದಾನ’ ಮಂಜೂರು
BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ನೆಲಮಂಗಲದಲ್ಲಿ ’73 ಭ್ರೂಣ ಹತ್ಯೆ’ ಪ್ರಕರಣ ಬೆಳಕಿಗೆ