ಬೆಂಗಳೂರು :  ವಿಧಾನ ಸೌಧದಲ್ಲಿ ಕಂದಾಯ ಸಚಿವ ಆರ್‌ ಅಶೋಕ್‌ ಸುದ್ದಿಗೋಷ್ಠಿ ನಡೆಸಿ  ಸತತವಾಗಿ ಸುರಿದ ಭಾರೀ ಮಳೆಗೆ ಈವರೆಗೆ 73 ಜನರು ಬಲಿಯಾಗಿದ್ದಾರೆ ʼ ಮಾಹಿತಿ ನೀಡಿದ್ದಾರೆ.

BIGG NEWS: ಕಲ್ಲಿದ್ದಲು ಹಗರಣ: ಮಾಜಿ ಕಲ್ಲಿದ್ದಲು ಕಾರ್ಯದರ್ಶಿಗೆ 3 ವರ್ಷ ಜೈಲು ಶಿಕ್ಷೆ

ರಾಜ್ಯದಲ್ಲಿ 14 ಜಿಲ್ಲೆಯಲ್ಲಿ ಪ್ರವಾಹ ಪಿಡಿತ ಪ್ರದೇಶವಾಗಿದೆ.  ಈಗಾಗಲೇ 161 ಗ್ರಾಮ 21,727 ಜನರು ಪ್ರವಾಹದಿಂದ  ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅತಿವೃಷ್ಠಿಯಿಂದ ಈವರೆಗೆ 73 ಜನರು ಸಾವನ್ನಪ್ಪಿದ್ದಾರೆ. ಸಿಡಿಲುಬಡಿದು 15 ಜನರು, ಮರಬಿದ್ದು 5 ಜನರು ಸಾವನ್ನಪ್ಪಿದ್ದಾರೆ. ಮನೆ ಕುಸಿದು 19 , ಪ್ರವಾಹಕ್ಕೆ ಸಿಲುಕಿ 24ಜನರು ಸಾವು.  ಭೂಕುಸಿತದಿಂದ 9, ವಿದ್ಯುತ್‌ ತಗುಲಿ ಓರ್ವ ಸಾವನ್ನಪ್ಪಿದ್ದಾನೆ.

ಪ್ರವಾಹ ಪೀಡಿತ ಪ್ರದೇಶದಿಂದ 8197 ಸ್ಥಳಾಂತರ ಮಾಡಲಾಗಿದೆ.ಕಾಳಜಿ ಕೇಂದ್ರದಲ್ಲಿ ಈವರೆಗೆ  7386ಜನರು ಆಶ್ರಯ ಪಡೆದಿದ್ದಾರೆ.  ಮಳೆಯಿಂದಾಗಿ 666 ಮನೆಗಳು ಸಂಪೂರ್ಣ ಹಾನಿ ಆಗಿದೆ.  2949 ಮನೆಗಳಿಗೆ ತೀವ್ರ ಹಾನಿಯಾಗಿದೆ. 17,750 ಮನೆಗಳು ಭಾಗಶಃ ಹಾನಿಯಾಗಿದೆ.

ಗಂಜಿ  ಕೇಂದ್ರದಿಂದ ಮನೆಗೆ ಹೋಗುವವರಿಗೆ . 10 ಕೆ.ಜಿ ಅಕ್ಕಿ, ತೊಗರಿ ಬೆಳೆ, ಉಪ್ಪು  ಎಣ್ಣೆ ಇರುವಂತಹ ಆಹಾರ ಕಿಟ್‌ ವಿತರಿಸಲಾಗಿದೆ. ಕೊಡೆ ಟಾರ್ಚ್‌ ಕೊಡುವ ಬಗ್ಗೆಯೂ ಚಿಂತನೆ ಮಾಡುವ ಮೂಲಕ ಕಂದಾಯ ಇಲಾಖೆಯಲ್ಲಿ ಬದಲಾವಣೆ ತರಲು ಸಂಕಲ್ಪ ಮಾಡಲಾಗಿದೆ.

BIGG NEWS: ಕಲ್ಲಿದ್ದಲು ಹಗರಣ: ಮಾಜಿ ಕಲ್ಲಿದ್ದಲು ಕಾರ್ಯದರ್ಶಿಗೆ 3 ವರ್ಷ ಜೈಲು ಶಿಕ್ಷೆ

ಮಳೆಹಾನಿ ಪ್ರದೇಶವಾದ ಚಿತ್ರದುರ್ಗ, ರಾಮನಗರಕ್ಕೆ ನಾಳೆ ತೆರಳಿ, ಸಾಂತ್ವನ ಹೇಳುವ ಮೂಲಕ ಪರಿಹಾರ ಘೋಷಣೆ ಮಾಡುತ್ತೇನೆ  ಎಂದು ಸಚಿವರು ತಿಳಿಸಿದ್ದಾರೆ. ಮಳೆಯಿಂದಾಗಿ ಒಟ್ಟು 11,768 ಕಿ.ಲೋ ಮೀಟರ್‌ ರಸ್ತೆ ಹಾನಿಯಾಗಿದೆ. ಮಳೆಯಿಂದ 1157 ಸೇತುವೆ, 4561 ಶಾಲೆಗಳಿಗೆ ಹಾನಿಯಾಗಿದೆ. 122 ಪ್ರಾಥಮಿಕ ಆರೋಗ್ಯ ಕೇಂದ್ರ 2249 ಅಂಗನವಾಡಿ, 17066 ವಿದ್ಯುತ್‌ ಕಂಬಗಳು,, 1472 ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ.

ಮಳೆಯಿಂದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುವುದು.  ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ ಎಫ್‌ನಿಂದ 4 ಲಕ್ಷ , ಸರ್ಕಾರದಿಂದ 1 ಲಕ್ಷ ನೀಡಲಾಗುವುದು. ಎಲ್ಲಾ ಡಿಜಿಗಳ ಖಾತೆಯಲ್ಲಿ 10 ಕೋಟಿ ರೂ ಹಣವಿದೆ. ಕಾಳಜಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ವಿತರಣೆಗೆ ಸೂಚನೆ.  ಲಂಬಾಣಿ ತಾಂಡಾ  ಗ್ರಾಮ ಎಂದು ಘೋಷಿಸಲು ನಿರ್ಧಾರ ಮಾಡಲಾಗಿದೆ.

 ರಾಜ್ಯದಲ್ಲಿ ಮಳೆ ಅವಾಂತರದಿಂದ ಸಾವುನೋವು ಹಿನ್ನೆಲೆ ಆ.4ರಂದು ಮನೆ ಹಾನಿ ಪರಿಹಾರಕ್ಕೆ 300 ಕೋಟಿ ಬಿಡುಗಡೆ ಮಾಡಲಾಗಿದೆ. ಆ.6 ರಂದು 21 ಜಿಲ್ಲೆಗಳಿಗೆ 200ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. 26 ಜಿಲ್ಲೆಗಳಿಗೆ ಒಟ್ಟು 55 ಕೋಟಿ ಬಿಡುಗಡೆಮಾಡಲಾಗಿದೆ. ತುರ್ತು ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

BIGG NEWS: ಕಲ್ಲಿದ್ದಲು ಹಗರಣ: ಮಾಜಿ ಕಲ್ಲಿದ್ದಲು ಕಾರ್ಯದರ್ಶಿಗೆ 3 ವರ್ಷ ಜೈಲು ಶಿಕ್ಷೆ

Share.
Exit mobile version