ಬೆಂಗಳೂರು: ಸಂಪಂಗಿ ರಾಮನಗರದಲ್ಲಿ ವೈದ್ಯರೊಬ್ಬರು ಮಾಡಿದಂತ ಎಡವಟ್ಟಿಗೆ 7 ವರ್ಷದ ಬಾಲಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ್ದಂತ ಘಟನೆ ನಡೆದಿದೆ.
ಬೆಂಗಳೂರಿನ ಸಂಪಂಗಿ ರಾಮನಗರದ 7 ವರ್ಷದ ಬಾಲಕ ಆಡನ್ ಮೈಕಲ್ ಎಂಬಾತನಿಗೆ ಊಟ ಮಾಡುವಂತ ಸಂದರ್ಭದಲ್ಲಿ ಗಂಟಲು ನೋವು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಸಿಂಧ್ಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಆಡನ್ ಮೈಕಲ್ ಪರೀಕ್ಷೆ ಮಾಡಿದಂತ ವೈದ್ಯರು, ಆಪರೇಷನ್ ಮಾಡಬೇಕು ಅಂತ ಹೇಳಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಸಿಂಧ್ಯಾ ಆಸ್ಪತ್ರೆಯ ಡಾ.ಶ್ವೇತಾ ಪೈ ಎಂಬುವರು ಬಾಲಕ ಆಡನ್ ಮೈಕಲ್ ಗೆ ಅನೆಸ್ತೇಷಿಯಾ ನೀಡಿದ್ದಾರೆ. ಹೀಗೆ ನೀಡಿದಂತ ಕೆಲವೇ ನಿಮಿಷದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.
ಇದನ್ನು ಮುಚ್ಚಿಕೊಳ್ಳೋದಕ್ಕೆ ಬಾಲಕನಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಅದು ಇದು ಅಂತ ಕಥೆ ಹೊಡೆದಿದ್ದಾರೆ. ಅನುಮಾನಗೊಂಡ ಪೋಷಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಬಾಲಕ ಅನೆಸ್ತೇಷಿಯಾ ಓವರ್ ಡೋಸ್ ಆಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಮೃತದೇಹ ಕಳುಹಿಸಿಕೊಡಲಾಗಿದೆ. ಆ ವರದಿಯ ನಂತ್ರ ಬಾಲಕನ ಸಾವಿಗೆ ಖಚಿತ ಮಾಹಿತಿ ತಿಳಿದು ಬರಲಿದೆ.
ಗ್ಯಾರಂಟಿಗಳನ್ನು ನಿಲ್ಲಿಸಿದರೆ, ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ- BJP ಎಚ್ಚರಿಕೆ
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ : ಕೇವಲ 60 ಸೆಕೆಂಡ್ ನಲ್ಲಿ ʻಚಾರ್ಜ್ʼ ಆಗಲಿದೆ ಫೋನ್!