ಹುಬ್ಬಳ್ಳಿ: ಆನ್ ಲೈನ್ ಗೇಮ್ ನಲ್ಲಿ 1 ಕೋಟಿ ಗೆದ್ದಿರುವಂತ ವಿಷಯ ತಿಳಿದು, ಆ ಬಾಲಕನನ್ನು ಅಪಹರಿಸಿ, ಪೋಷಕರಿಗೆ ಕರೆ ಮಾಡಿ, ಮಗನನ್ನು ಬಿಡೋದಕ್ಕೆ 1 ಕೋಟಿ ರೂ ಗೆ ಬೇಡಿಕೆ ಇಟ್ಟಿದ್ದಂತ 7 ಮಂದಿ ಅಪಹರಣಕಾರರನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಗರೀಬ್ ನವಾಜ್ ಮುಲ್ಲಾ ಎಂಬಾತ, ಆನ್ ಲೈನ್ ಗೇಮ್ ನಲ್ಲಿ 11 ಕೋಟಿ ಗೆದ್ದಿದ್ದನು. ಈ ವಿಷಯವನ್ನು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದನು. ಈ ಮಾಹಿತಿ ತಿಳಿದಂತ ಕೆಲ ಯುವಕರು, ಸುಲಭವಾಗಿ ಹಣ ಸಂಪಾದಿಸೋ ಕಾರಣದಿಂದಾಗಿ ಮುಲ್ಲಾ ಅಪಹರಿಸೋ ಪ್ಲಾನ್ ಮಾಡಿದ್ದಾರೆ. ಅದರಂತೆ ಆಗಸ್ಟ್ 6ರಂದು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ಡೆಕಥ್ಲಾನ್ ಬಳಿಯಲ್ಲಿ ಮುಲ್ಲಾ ನನ್ನು ಅಪಹರಿಸಿದ್ದಾರೆ.

ಇನ್ಮುಂದೆ ‘ಎಲ್ಲಾ ಎಲೆಕ್ಟ್ರಾನಿಕ್ ಉಪಕರಣ’ಕ್ಕೂ ಒಂದೇ ಮಾದರಿಯ ‘ಚಾರ್ಜರ್’.! | One charger for all gadgets

ಗರೀಬ್ ನವಾಜ್ ಮುಲ್ಲಾ ಅಪಹಿರಿಸಿದಂತ ಅಪಹರಣಕಾರರರು, ಪೋಷಕರಿಗೆ ಕರೆ ಮಾಡಿ ನಿಮ್ಮ ಮನಗನನ್ನು ಅಪಹರಿಸಲಾಗಿದೆ. ಬಿಡಬೇಕಾದ್ರೇ 1 ಕೋಟಿ ನೀಡಬೇಕು ಎಂಬುದಾಗಿ ಮೊದಲು ಬೇಡಿಕೆ ಇಟ್ಟಿದ್ದಾರೆ. ಆ ಬಳಿಕ 15 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಭಯಗೊಂಡಂತ ಮುಲ್ಲಾ ಪೋಷಕರು, ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಗೆ ಮಗನ ಅಹರಹಣ ಸಂಬಂಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದಂತ ಪೊಲೀಸರು, ಅಪಹರಣಕಾರರ ಮೊಬೈಲ್ ಲೊಕೇಷನ್ ಆಧಾರದ ಮೇಲೆ 7 ಅಪಹರಣಕಾರರನ್ನು ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿಯಲ್ಲಿ ಬಂಧಿಸಿದ್ದಾರೆ. ಈ ಮೂಲಕ ಅಪಹರಣ ಪ್ರಕರಣ ಸುಖಾಂತ್ಯಗೊಂಡಂತೆ ಆಗಿದೆ.

BREAKING NEWS : ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ʻ ಖಾಸಗಿ ಬಸ್‌ ಪಲ್ಟಿ ʼ : 20ಕ್ಕೂ ಹೆಚ್ಚು ಜನರಿಗೆ ಗಾಯ , ʻಐವರ ಸ್ಥಿತಿ ಗಂಭೀರ ʼ

Share.
Exit mobile version