ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೈಬರ್ ವಂಚನೆ ಮಾಡುತ್ತಿದ್ದಂತ 7 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ 9 ಮೊಬೈಲ್, 11 ಬ್ಯಾಂಕ್ ಪಾಸ್ ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್ ಸೀಜ್ ಮಾಡಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ:07/01/2025 ರಂದು ಪಿರಾದುದಾರರಿಗೆ ಓರ್ವ ವ್ಯಕ್ತಿಯು ಪೇಸ್ಬುಕ್ನಲ್ಲಿ ನಕಲಿ ಖಾತೆಯಿಂದ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದು, ಆ ನಕಲಿ ಖಾತೆಯ ಫೇಸ್ಬುಕ್ ಪ್ರೊಫೈಲ್ನಲ್ಲಿ ಪಿರಾದುದಾರರ ಹಳೆಯ ಸ್ನೇಹಿತನ ಫೋಟೋ ಇರುವುದನ್ನು ಪಿರಾದುದಾರರು ಕಂಡು ಅದು ನಿಜವೆಂದು ನಂಬಿ, ಪ್ರೆಂಡ್ಸ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿರುತ್ತಾರೆ.
ಪೇಸ್ಬುಕ್ನಲ್ಲಿ ಪ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ ವ್ಯಕ್ತಿಯು ಪಿರ್ಯಾದುದಾರರಿಗೆ ತಾನು ದುಬೈನಲ್ಲಿ ಇರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ತಾನು ವಾಪಸ್ ಭಾರತಕ್ಕೆ ಬರುವುದಾಗಿ ತಿಳಿಸಿ ತನ್ನ ಬಳಿ ಇರುವ ಅಪಾರವಾದ ಹಣ ತೆಗೆದುಕೊಂಡು ಭಾರತಕ್ಕೆ ಬಂದರೆ ಹೆಚ್ಚಿನ ತೆರಿಗೆಯನ್ನು ನೀಡಬೇಕಾಗಿರುತ್ತದೆ. ಆದ್ದರಿಂದ ತನ್ನ ಬಳಿ ಇರುವ ಹಣವನ್ನು ಪಿರ್ಯಾದುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ವಾಪಸ್ ಬೆಂಗಳೂರಿಗೆ ಬಂದ ನಂತರ ಪಿರಾದುದಾರರ ಬಳಿಯಿಂದ ವಾಪಸ್ ಪಡೆಯುವುದಾಗಿ ತಿಳಿಸಿರುತ್ತಾನೆ. ಇದನ್ನು ನಂಬಿದ ಪಿರಾದುದಾರರು, ಬ್ಯಾಂಕ್ ಖಾತೆಯ ನಂಬರ್ನ್ನು ನೀಡಿರುತ್ತಾರೆ. ಆ ನಂತರ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ ವ್ಯಕ್ತಿಯು ಪಿರಾದುದಾರರ ಬ್ಯಾಂಕ್ ಖಾತೆಗೆ 3 7,85,700/- ಹಣವನ್ನು ವರ್ಗಾವಣೆ ಮಾಡಿರುವಂತಹ ಸಿಟಿ ಬ್ಯಾಂಕ್ನ ನಕಲಿ ರಸೀದಿಯನ್ನು ಪೇಸ್ಬುಕ್ ಮುಖಾಂತರ ಪಿರಾದಿಯವರಿಗೆ ಕಳುಹಿಸಿ, ಈ ಹಣವು 24 ಗಂಟೆಗಳಲ್ಲಿ ಪಿರಾದುದಾರರ ಖಾತೆಗೆ ಕ್ರೆಡಿಟ್ ಆಗುವುದಾಗಿಯೂ ಸಹ ತಿಳಿಸಿರುತ್ತಾನೆ.
ಮಾರನೆಯ ದಿನ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ ವ್ಯಕ್ತಿಯು ಪಿರ್ಯಾದುದಾರರಿಗೆ ಪೇಸ್ಬುಕ್ ಮುಖಾಂತರ ತಾನು ಸೌದಿ ಅರೇಬಿಯಾ ದೇಶದ ಪೊಲೀಸ್ ಠಾಣೆಯೊಂದರಲ್ಲಿ ತೊಂದರೆಗೆ ಸಿಲುಕಿದ್ದು, ತುರ್ತಾಗಿ ೯ 1,95,000/- ಹಣದ ಅವಶ್ಯಕತೆ ಇದ್ದು, ಈ ಹಣವನ್ನು ಓರ್ವ ಏಜೆಂಟ್ನ ಮೊಬೈಲ್ ನಂಬರ್ಗೆ ಕಳುಹಿಸುವಂತೆ ತಿಳಿಸಿದ್ದು, ಇದನ್ನು ನಂಬಿದ ಪಿರ್ಯಾದುದಾರರು ಆತನ ಮಾತನ್ನು ನಂಬಿ ಆತನು ನೀಡಿದ್ದ ಮೊಬೈಲ್ ನಂಬರ್ಗೆ ಮೆಸೇಜ್ ಮುಖಾಂತರ ಸಂಪರ್ಕಸಿ, ಬ್ಯಾಂಕ್ ಖಾತೆಯ ನಂಬರ್ನ್ನು ಪಡೆದು ಕೆ 5,000/- ಹಣವನ್ನು ಐಎಂಪಿಎಸ್ (Immediate Payment Service) ಮೂಲಕ, ಸಂದಾಯ ಮಾಡಿರುತ್ತಾನೆ.
ಇದೇ ರೀತಿ ಪಿತ್ಯಾದಿಯವರಿಂದ ಹಂತ ಹಂತವಾಗಿ ಒಟ್ಟು ೯ 150,000/- ಹಣವನ್ನು ಪಡೆದುಕೊಂಡಿರುತ್ತಾನೆ. 24 ಗಂಟೆಯಾದ ನಂತರ ಪಿದ್ಯಾದಿಯವರು ಅವರ ಬ್ಯಾಂಕ್ ಖಾತೆಯ ಅಕೌಂಟ್ ಸ್ಟೇಂಟ್ಮೆಂಟ್ನ್ನು ಪರಿಶೀಲಿಸಿದಾಗ, ಯಾವುದೇ ಹಣವು ಪಿರಾದುದಾರರ ಖಾತೆಗೆ ಜಮಾವಾಗಿಲ್ಲದಿರುವುದನ್ನು ಅರಿತು. ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಆಡುಗೋಡಿ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿರುತ್ತಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಹಣ ವರ್ಗಾವಣೆಯಾದ ಬ್ಯಾಂಕ್ನ ಮಾಹಿತಿಯನ್ನು ಕಲೆ ಹಾಕಿ, ದಾಖಲೆಗಳನ್ನು ಪಡೆದು, ವರ್ಗಾವಣೆಯಾದ ಹಣದ ವಿವರವನ್ನು ಪಡೆದು ತನಿಖೆಯನ್ನು ಕೈಗೊಂಡು, ಮೈಸೂರಿನಲ್ಲಿರುವ ಬ್ಯಾಂಕ್ ಆಪ್ ಮಹರಾಷ್ಟ್ರ ಖಾತೆದಾರನಿಗೆ ಹಣ ವರ್ಗಾವಣೆಯಾದ ಬಗ್ಗೆ ಮಾಹಿತಿಯನ್ನು ಪಡೆದು, ದಿನಾಂಕ:17/01/2025 ರಂದು ಓರ್ವ ವ್ಯಕ್ತಿಯನ್ನು ಮೈಸೂರಿನ ಬೆಳವಾಡಿಯಲ್ಲಿರುವ ಆತನ ವಾಸದ ಮನೆಯಿಂದ ವಶಕ್ಕೆ ಪಡೆಯಲಾಯಿತು.
ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಮತ್ತೋರ್ವ ಸಹಚರನ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ. ಈ ಸಹಚರನನ್ನು ಅದೇ ದಿನ ಮೈಸೂರಿನ ರಿಂಗ್ ರಸ್ತೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆತನು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡು, ಇತರೆ ಇಬ್ಬರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ. ಆ ಇಬ್ಬರು ಸಹಚರರನ್ನು ಮೈಸೂರಿನಲ್ಲಿರುವ ಮಂಡಿಮೊಹೊಲ್ಲಾದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ.
ದಿನಾಂಕ:18/01/2025 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಓರ್ವ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ನೀಡಿರುತ್ತೆ.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಮೂವರು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ಈತನ ಮಾಹಿತಿಯ ಮೇರೆಗೆ ದಿನಾಂಕ:20/01/2025 ರಂದು ಮೈಸೂರಿನ ರಿಂಗ್ ರಸ್ತೆಯಲ್ಲಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ದಿನಾಂಕ:20/01/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಐದು ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ಈ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಅವರುಗಳು ವಾಸವಿರುವ ಮನೆಗಳಿಂದ ಒಟ್ಟು 09 ಮೊಬೈಲ್ ಫೋನ್, 11 ಬ್ಯಾಂಕ್ ಪಾಸ್ ಬುಕ್, 06 ಚೆಕ್ ಬುಕ್, 31 ಎಟಿಎಂ ಕಾರ್ಡ್, 09 ಆಧಾರ್ ಕಾರ್ಡ್ಗಳ ವಶಪಡಿಸಿಕೊಳ್ಳಲಾಯಿತು.
ನಂತರ ಆರೋಪಿತರು ತೆರೆದಿದ್ದ ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಆರೋಪಿತರಿಂದ ಮೋಸ ಹೋಗಿದ್ದ ಸಾರ್ವಜನಿಕರು ಸೈಬರ್ ಹೆಲ್ತ್ ಲೈನ್ ನಂಬರ್-1930 ಗೆ ನೀಡಿದ ದೂರಿನ ಆಧಾರದ ಮೇರೆಗೆ ಒಟ್ಟು 28 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ದಿನಾಂಕ:23/01/2025 ರಂದು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ಮಾರ್ಗದರ್ಶನದಲ್ಲಿ, ಮಡಿವಾಳ ಉಪ ವಿಭಾಗದ ಎಸಿಪಿ ಕೆ.ಸಿ.ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಆಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ ಸಿ ಅವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!