ಬೆಂಗಳೂರು: ಕಸದ ಟೆಂಡರ್ ಪಡೆಯೋದಕ್ಕೆ ಶೇ.7ರಷ್ಟು, ಬಿಲ್ ಮಂಜೂರಾತಿಗೆ ಶೇ.7, ಎಲ್ಒಸಿಗೆ ಶೇ.7ರಷ್ಟು ಕಮೀಷನ್ ನೀಡಬೇಕು ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಸದ ಟೆಂಡರ್ ಪಡೆಯಲು ಶೇ.7ರಷ್ಟು ಕಮಿಷನ್ ಕೊಡಬೇಕು. ಬಿಲ್ ಮಂಜೂರಾತಿಗೆ 7%, ಸ್ಪೆಷಲ್ ಎಲ್ಒಸಿಗೆ 7% ಕೊಡಬೇಕು ಎಂಬುದಾಗಿ ಆರೋಪಿಸಿದರು.
ಒಟ್ಟಾರೆಯಾಗಿ ರಾಜ್ಯ ಸರ್ಕಾರಕ್ಕೆ ಶೇಕಡಾ 21ರಷ್ಟು ಕಮೀಷನ್ ಹೋಗುತ್ತೆ. ಇದಲ್ಲದೇ ಇಂಜಿನಿಯರ್ ಗಳಿಗೆ ಬೇರೆ ರೀತಿಯಲ್ಲಿ ಕೊಡಬೇಕು. ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಸರ್ಕಾರದ ಮಾಫಿಯಾವೇ ಕಾರಣವಾಗಿದೆ ಎಂದರು.








