ನವದೆಹಲಿ: ದೆಹಲಿ ಚುನಾವಣೆಗೆ ಕೇವಲ ಐದು ದಿನಗಳ ಮೊದಲು ಆಮ್ ಆದ್ಮಿ ಪಕ್ಷದ (ಎಎಪಿ) 7 ಹಾಲಿ ಶಾಸಕರು ರಾಜೀನಾಮೆ ನೀಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಭ್ರಷ್ಟಾಚಾರದ ಆರೋಪಗಳನ್ನು ಉಲ್ಲೇಖಿಸಿ ಮೆಹ್ರೌಲಿಯ ಶಾಸಕ ನರೇಶ್ ಯಾದವ್ ಅವರು ಮೊದಲು ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಇನ್ನೂ ಏಳು ಶಾಸಕರು ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ.
ಇದರಲ್ಲಿ ಜನಕ್ಪುರಿಯ ರಾಜೇಶ್ ರಿಷಿ, ಪಾಲಂನ ಭಾವನಾ ಗೌರ್, ಬಿಜ್ವಾಸನ್ನ ಬಿಎಸ್ ಜೂನ್, ಆದರ್ಶ್ ನಗರದ ಪವನ್ ಶರ್ಮಾ, ಕಸ್ತೂರ್ಬಾ ನಗರದ ಮದನ್ಲಾಲ್ ಮತ್ತು ತ್ರಿಲೋಕ್ಪುರಿಯ ರೋಹಿತ್ ಮಹಾರೋಲಿಯಾ ಸೇರಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ ಟಿಕೆಟ್ ಕಡಿತದ ಬಗ್ಗೆ ಎಲ್ಲಾ ಶಾಸಕರು ಅಸಮಾಧಾನ ಹೊಂದಿದ್ದರು.
ಈ 7 ಶಾಸಕರು ರಾಜೀನಾಮೆ
ಪಾಲಂ- ಭಾವನಾ ಗೌಡ್
ಬಿಜ್ವಾಸನ್- ಬಿಎಸ್ ಜೂನ್
ಆದರ್ಶ್ ನಗರ- ಪವನ್ ಶರ್ಮಾ
ಕಸ್ತೂರ್ಬಾ ನಗರ – ಮದನ್ ಲಾಲ್
ಜನಕ್ಪುರಿ- ರಾಜೇಶ್ ರಿಷಿ
ತ್ರಿಲೋಕ್ಪುರಿ- ರೋಹಿತ್ ಮೆಹ್ರೌಲಿಯಾ
ಮಹಾರಾಣಿ- ನರೇಶ್ ಯಾದವ್