ಬೆಳಗಾವಿ: 2025ಕ್ಕಿಂತ 2026ರಲ್ಲಿ ಕಷ್ಟಗಳು, ಸವಾಲುಗಳು ಹೆಚ್ಚಿರಲಿವೆ. 2026ಕ್ಕೆ ಜಗತ್ತೇ ಮುಳುಗುತ್ತೆ. ಶೇ.7-8% ನಷ್ಟು ಜಗತ್ತೇ 2026ರಲ್ಲಿ ಮುಳುಗಿ ಹೋಗುತ್ತದೆ ಎಂಬುದಾಗಿ ಹೊಸ ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕೋಡಿಮಠ ಶ್ರೀಗಳು ಶಾಕಿಂಗ್ ಭವಿಷ್ಯವನ್ನು ನುಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಂಕ್ರಾಂತಿ ಫಲದಲ್ಲಿ ಸೂರ್ಯನು ಉತ್ತರಾಯಣದ ಕಡೆ ಹೋಗುತ್ತಾನೆ. ಇದು ರಾಜ-ಮಹಾರಾಜರು, ವ್ಯಾಪಾರಸ್ಥರಿಗೆ, ದುಡಿಮೆದಾರರಿಗೆ ಉತ್ತಮ ಲಾಭ ತಂದುಕೊಡಲಿದೆ ಎಂದಿದ್ದಾರೆ.
2025ಕ್ಕಿಂತ 2026ರಲ್ಲಿ ಕಷ್ಟಗಳು, ಸವಾಲುಗಳು ಹೆಚ್ಚಾಗಿ ಇರಲಿದ್ದಾವೆ. ಯುಗಾದಿ ಕಳೆದ ಮೇಲೆ ಮಳೆ, ಬೆಳೆ ಬಗ್ಗೆ ರೈತರು, ಭೂಮಿ ಬಗ್ಗೆ ಹೇಳುತ್ತೇನೆ. ಆದರೇ 2026ರಲ್ಲಿ ಜಗತ್ತಿಗೆ ಕಷ್ಟಗಳ ಸರಮಾಲೆಯನ್ನೇ ತರಲಿದೆ ಎಂಬುದಾಗಿ ಶಾಕಿಂಗ್ ಭವಿಷ್ಯ ನುಡಿದರು.
2026ರಲ್ಲಿ ಭಾರೀ ಪ್ರಮಾಣದಲ್ಲಿ ಮಳೆ, ಪ್ರವಾಹ ಎದುರಾಗಲಿದೆ. ಆಪತ್ತಿನಿಂದಾಗಿ ಏಳೆಂಟು ಪರ್ಸೆಂಟ್ ಈ ಜಗತ್ತೇ ಮುಳುಗುವ ಲಕ್ಷಣ ಗೋಚರಲಾಗುತ್ತಿದೆ ಎಂಬುದಾಗಿ ಹೇಳುವ ಮೂಲಕ, ಜಗತ್ತು ಮುಳುಗೋ ಶಾಕಿಂಗ್ ವಿಷಯವನ್ನು ತಮ್ಮ ಭವಿಷ್ಯದಲ್ಲಿ ತೆರೆದಿಟ್ಟಿದ್ದಾರೆ. ಅಲ್ಲದೇ ಯುಗಾದಿಯ ನಂತ್ರ ನಿಖವಾದ, ವಿಸ್ತೃತ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
BREAKING: ಹೊಸ ವರ್ಷದ ಹೊತ್ತಲ್ಲೇ ರಾಜ್ಯ ರಾಜಕೀಯದ ಬಗ್ಗೆ ಸ್ಫೋಟ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು








