ಬೆಂಗಳೂರು: ನಗರದಲ್ಲಿ ಆರ್ ಬಿ ಐ ಅಧಿಕಾರಿಗಳು ಎಂಬುದಾಗಿ ಹೇಳಿಕೊಂಡು ಎಟಿಎಂಗೆ ಹಣ ತುಂಬೋದಕ್ಕೆ ತೆರಳುತ್ತಿದ್ದಂತ ವಾಹನ ಅಡ್ಡಗಟ್ಟಿ ಬರೋಬ್ಬರಿ 7.11 ಕೋಟಿ ಹಣವನ್ನು ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವಂತ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ.
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವಂತ ಜಯದೇವ ಡೈರಿ ಸರ್ಕಲ್ ನಲ್ಲಿ ಈ ಬೆಚ್ಚಿ ಬೀಳಿಸೋ ರಾಬರಿ ನಡೆದಿದೆ. 7 ರಿಂದ 8 ಮಂದಿ ಇನ್ನೋವಾ ಕಾರಿನಲ್ಲಿ ಬಂದಿದ್ದಾರೆ. ತಾವು ಆರ್ ಬಿಐ ಅಧಿಕಾರಿಗಳು ಎಂಬುದಾಗಿ ವಾಹನ ಅಡ್ಡಗಟ್ಟಿದ್ದಾರೆ. ವಾಹನ ಪರಿಶೀಲನೆಗೆ ಇಳಿದಿದ್ದಾರೆ.
ಆ ಬಳಿಕ ಎಟಿಎಂ ವಾಹನದ ಸಿಬ್ಬಂದಿಗಳನ್ನು ಬೆದರಿಸಿ ಅವರ ವಾಹನದಲ್ಲಿದ್ದಂತ 7.11 ಕೋಟಿ ಹಣವನ್ನು ತಮ್ಮ ಕಾರಿಗೆ ಶಿಫ್ಟ್ ಮಾಡಿಕೊಂಡು ಸ್ಥಳದಿಂದ ಕಾಲ್ ಕಿತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸದ್ದಗುಂಟೆ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
BREAKING: ಬಿಹಾರದ JD(U) ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆ | Bihar Government Formation
ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!








