ಬೆಂಗಳೂರು: ನಗರದ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ. 68.73% ಫಲಿತಾಂಶ ಬಂದಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಬಿಎಂಪಿ ಮಾಹಿತಿ ನೀಡಿದ್ದು, 2023-24ನೇ ಶೈಕ್ಷಣಿಕ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯಲ್ಲಿ 33 ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಒಟ್ಟು 2501 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 1719 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ 68.73% ರಷ್ಟು ಫಲಿತಾಂಶ ಬಂದಿರುತ್ತದೆ ಎಂದಿದೆ.

ಬಿಬಿಎಂಪಿ ಮತ್ತಿಕೆರೆ ಬಾಲಕಿಯರ ಪ್ರೌಢಶಾಲೆಯು ಶೇ. 92.78 ಫಲಿತಾಂಶವನ್ನು ನೀಡಿ ಅಗ್ರಸ್ಥಾನ ಪಡೆದು ಪಾಲಿಕೆಗೆ ಕೀರ್ತಿ ತಂದಿದ್ದಾರೆ. ಬಿಬಿಎಂಪಿ ಭೈರವೇಶ್ವರ ನಗರ ಪ್ರೌಢಶಾಲೆಯು ಶೇ. 91.98 ಫಲಿತಾಂಶವನ್ನು ನೀಡಿ ಎರಡನೇ ಸ್ಥಾನವನ್ನು ಪಡೆದಿದೆ. ಬಿ.ಬಿ.ಎಂ.ಪಿ. ಹೇರೋಹಳ್ಳಿ ಪ್ರೌಢಶಾಲೆಯು ಶೇ. 90.56 ಫಲಿತಾಂಶವನ್ನು ನೀಡಿ ಮೂರನೇ ಸ್ಥಾನವನ್ನು ಪಡೆದಿದೆ ಎಂದಿದೆ.

2023-24ನೇ ಸಾಲಿನಲ್ಲಿ ಒಟ್ಟು 66 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶ್ರೀರಾಂಪುರ ಬಾಲಕಿಯರ ಪ್ರೌಢಶಾಲೆಯ ಕು|| ಚಂದನ .ಪಿ ರವರು 625ಕ್ಕೆ 619 ಅಂಕಗಳನ್ನು ಪಡೆದು ಶೇ. 99.00 ರಷ್ಟು ಅಂಕಗಳನ್ನು ಗಳಿಸಿ ಪಾಲಿಕೆಗೆ ಕೀರ್ತಿ ತಂದಿರುತ್ತಾರೆ ಎಂದು ತಿಳಿಸಿದೆ.

ಲಗ್ಗೆರೆ ಪ್ರೌಢಶಾಲೆಯ ಯಶವಂತ್ ಟಿ.ಜೆ. ರವರು 625ಕ್ಕೆ 610 ಅಂಕಗಳನ್ನು ಪಡೆದು ಶೇ. 97.60 ರಷ್ಟು ಅಂಕಗಳನ್ನು ಗಳಿಸಿ ಪಾಲಿಕೆಗೆ ಕೀರ್ತಿ ತಂದಿರುತ್ತಾರೆ ಎಂದು ಹೇಳಿದೆ.

‘SSLC ಪರೀಕ್ಷೆಯಲ್ಲಿ ಫೇಲ್’ ಆದ ವಿದ್ಯಾರ್ಥಿಗಳೇ ಗಮನಿಸಿ: ‘ಮರು ಪರೀಕ್ಷೆ’ ದಿನಾಂಕ ಪ್ರಕಟ | SSLC Main Exam-2 Timetable

‘SSLC ಪರೀಕ್ಷೆಯಲ್ಲಿ ಫೇಲ್’ ಆದ ವಿದ್ಯಾರ್ಥಿಗಳೇ ಗಮನಿಸಿ: ‘ಮರು ಪರೀಕ್ಷೆ’ ದಿನಾಂಕ ಪ್ರಕಟ | SSLC Main Exam-2 Timetable

Share.
Exit mobile version