ನವದೆಹಲಿ: ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದೇ ಸಂದರ್ಭದಲ್ಲಿ 63 ಸಂಸದರು ಸಚಿವರಾಗಿ ಅವರೊಟ್ಟಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ಬಾರಿ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಐವರು ಸಚಿವರಾಗುವ ಸಾಧ್ಯೆತಗಳಿವೆ. ಮೂವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕರೆ, ಇನ್ನುಳಿದಂತೆ ಇಬ್ಬರಿಗೆ ರಾಜ್ಯ ದರ್ಜೆ ಖಾತೆ ಸಿಗುವ ಸಾಧ್ಯತೆಗಳಿವೆ. ನಿರ್ಮಲಾ ಸೀತಾರಾಮನ್(ಕರ್ನಾಟ ರಾಜ್ಯಸಭಾ ಸದಸ್ಯೆ), ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ದೊರೆಯುವ ಸಾಧ್ಯೆತೆಗಳಿವೆ, ಇನ್ನು ರಾಜ್ಯ ದರ್ಜೆ ಸಚಿವರಾಗಿ ಶೋಭಾ ಕರಂದ್ಲಾಜೆ ಮತ್ತು ತುಮಕೂರು ಸಂಸದ ಸೋಮಣ್ಣಗೆ ಅವಕಾಶ ಸಿಗುವ ನಿರೀಕ್ಷೆಗಳಿವೆ.
ಇದೀಗ ಬಂದ ಮಾಹಿತಿ ಪ್ರಕಾರ, 63 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಉತ್ತರ ಪ್ರದೇಶ, ಬಿಹಾರದಿಂದ ತಲಾ 8 ಸಂಸದರಿಗೆ ಮಂತ್ರಿಗಿರಿ ದೊರಕಿದೆ. ಮಹಾರಾಷ್ಟ್ರದಿಂದ 6 ಸಂಸದರಿಗೆ ಕೇಂದ್ರ ಸಚಿವ ಸ್ಥಾನ. ಗುಜರಾತ್ ಐವರು, ಆಂಧ್ರ ಪ್ರದೇಶದಲ್ಲಿ ಮೂವರಿಗೆ ಮಂತ್ರಿಗಿರಿ. ಪಶ್ಚಿಮ ಬಂಗಾಳ, ತೆಲಂಗಾಣದಲ್ಲಿ ತಲಾ ಇಬ್ಬರಿಗೆ ಸಚಿವ ಸ್ಥಾನ. ಕೇರಳದಲ್ಲಿ ಗೆದ್ದ ಓರ್ವ ಬಿಜೆಪಿ ಸಂಸದನಿಗೆ ಸಚಿವ ಸ್ಥಾನ ಒಲಿದಿದೆ. ಇನ್ನು ಕರ್ನಾಟಕ್ಕೆ ಐದು ಸಚಿವ ಸ್ಥಾನ ಸಿಕ್ಕಿವೆ.
Watch Video: ‘ಬಿಯರ್’ ಖರೀದಿಸುವಾಗ ‘ಬಾರ್’ನಲ್ಲೇ ತಗ್ಲಾಕೊಂಡ ‘ಮಗ’: ಅಪ್ಪ ಮಾಡಿದ್ದೇನು ಗೊತ್ತಾ?
Modi 3.0: ‘ಕೇಂದ್ರ ಸಚಿವ’ರಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ‘ಮೋದಿ’ಗೆ ಧನ್ಯವಾದ ಅರ್ಪಿಸಿದ ‘HD ಕುಮಾರಸ್ವಾಮಿ’