ಬೆಂಗಳೂರು: ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆ ಉದ್ಘಾಟನೆಗೊಂಡಿದೆ.
ಉಡುಪಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಅದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಶ್ರೀ ಸೌಮ್ಯನಾಥ ಸ್ವಾಮೀಜಿರವರು ಲೋಕರ್ಪಣೆ ಮಾಡಿದರು.
ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರವರು ಮಾತನಾಡಿ ಮನುಷ್ಯನ ಜೀವನ ಮೌಲ್ಯಯುತವಾಗಿ ಬದುಕಲು ಮತ್ತು ಲೋಕದಲ್ಲಿ ಜನರು ಆದರ್ಶವಾಗಿ ಜೀವನ ಸಾಗಿಸಲು ಶ್ರೀರಾಮ ಆದರ್ಶ ಆಳವಡಿಸಿಕೊಳ್ಳಿ ಎಂದರು.
ಹಿಂದೂ ಸಮಾಜ ಸಂರಕ್ಷಣೆ ಸಂಘಟನೆ ಒಗ್ಗಾಟಿಗೆ ಧರ್ಮ ಕಾರ್ಯಗಳು ನಡೆಯುತ್ತಿರಬೇಕು. ಎಲ್ಲರಿಗೂ ಶ್ರೀರಾಮನಾ ಮೂರ್ತಿ ಸ್ಪೂರ್ತಿಯಾಗಿದೆ. ಪಿತೃವಾಕ್ಯ ಪರಿಪಾಲಕ, ಆದರ್ಶ ಪತಿ ಶ್ರೀರಾಮ, ಮಾರ್ಯಾದ ಪುರಷೋತ್ತಮ ಎಂದು ಕರೆಯುತ್ತಾರೆ ಅಂದರೆ ಜೀವನದಲ್ಲಿ ಯುವಕರು ತಂದೆ, ತಾಯಿಗೆ ಉತ್ತಮ ಮಗನಾಗಿ ಮತ್ತು ಸತಿಗೆ ಉತ್ತಮ ಪತಿಯಾಗಿ ಹಾಗೂ ಸಮಾಜದಲ್ಲಿ ಉತ್ತಮಪ್ರಜೆಯಾಗಿ ಜೀವನ ಸಾಗಿಸಲು ಪ್ರಭು ಶ್ರೀರಾಮ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಶ್ರೀ ಶ್ರೀ ಶ್ರೀ ಪ್ರಸನ್ನ ತೀರ್ಥ ಸ್ವಾಮೀಜಿರವರು ಮಾತನಾಡಿ ಭಕ್ತರು ಎಲ್ಲರ ಕೊಡಿಕೊಂಡು ಉತ್ತಮ ಕೆಲಸ ಮಾಡಿದ್ದೀರ, ದೇಶದಲ್ಲಿ ಶ್ರೀರಾಮ ರಾಜ್ಯ ನಿರ್ಮಾಣವಾಗಬೇಕು.
ಪ್ರಭು ಶ್ರೀರಾಮ, ಅಂಜನೇಯ ದೇವರುಗಳಿಗೆ ಕರ್ನಾಟಕಕ್ಕೂ ಅವಿನಾಭವ ಇತಿಹಾಸವಿದೆ. ಶ್ರೀರಾಮನಾ ಆಡಳಿತ, ಗುಣ, ಮನಸ್ಸು, ಪಿತೃವಾಕ್ಯ ಪರಿಪಾಲನೆ, ಕುಟುಂಬ ಸಂಭಂದ ಎಲ್ಲವು ಅವಿಸ್ಮರಣಿಯ ಇದನ್ನ ಪ್ರತಿಯೊಬ್ಬರು ಆಳವಡಿಸಿಕೊಂಡರೆ ಪ್ರತಿಯೊಬ್ಬರ ಕುಟುಂಬ ನೆಮ್ಮದ್ದಿ, ಶಾಂತಿಯಿಂದ ಬದುಕಬಹುದು.
ಬಿ.ಎಸ್.ಯಡಿಯೂರಪ್ಪರವರು ಮಾತನಾಡಿ ಪ್ರಭು ಶ್ರೀರಾಮ ನಾಮ ಜಪದಿಂದ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತದೆ. ಶ್ರೀರಾಮನಾ ಆದರ್ಶಗುಣಗಳು ಸ್ಪೂರ್ತಿಯಾಗಿದೆ, ಸನಾತನ ಧರ್ಮ ಪ್ರತಿಕ ಶ್ರೀರಾಮ. ಪ್ರಭು ಶ್ರೀರಾಮನಾ ಆದರ್ಶ ಉತ್ತಮ ಮಗನಾಗಿ, ಹೆಂಡತಿ ಉತ್ತಮ ಪತಿಯಾಗಿ, ಜನರ ಉತ್ತಮ ರಾಜನಾಗಿ, ಜನರ ಹಿತಕಾಯುವ ದೈವ ಸ್ವರೂಪಿ ಶ್ರೀರಾಮ ಸ್ಮರಣೆ ಎಲ್ಲರು ಮಾಡಬೇಕು ಎಂದು ಹೇಳಿದರು.
29ವರ್ಷದ ಯುವ ಶಿಲ್ಪಿ ಜೀವನ್ ಶ್ರೀರಾಮಾಂಜನೇಯ ಮೂರ್ತಿ ನಿರ್ಮಾಣದ ಶಿಲ್ಪಿ ಶಿವಮೊಗ್ಗ ಜಿಲ್ಲೆಯ ಶಿಲ್ಪಿ ಜೀವನ್ ರವರ ವಯಸ್ಸು 29ವರ್ಷ ಚಿಕ್ಕ ವಯಸ್ಸಿನಲ್ಲಿ ಅದ್ಬುತ ಕಲಾವಿದ ಎಂದು ಕೀರ್ತಿಗಳಿಸಿದ್ದಾರೆ. ನೂರಾರು ಪ್ರತಿಮೆ ಮತ್ತು ಮೂರ್ತಿಗಳನ್ನು ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಇವರು ತಯಾರಿಕೆ ಮಾಡಿದ್ದಾರೆ.
ಅದರಲ್ಲಿ ಬಳ್ಳಾರಿಯಲ್ಲಿ 23 ಅಡಿ ಎತ್ತರದ ರಾಜ್ಯದ ಅತಿಡೊಡ್ಡ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರ ಪ್ರತಿಮೆ , 51 ಅಡಿ ಎತ್ತರದ ಜಗದ್ಗುರು ಶ್ರೀ ರೇಣುಕಾಚಾರ್ಯರ ಪ್ರತಿಮೆ ಶಿಕಾರಿಪುರದಲ್ಲಿ ಮತ್ತು 62ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹ ಚನ್ನಪಟ್ಟಣ ಗೌಡಗೆರೆ ಇದೀಗ ಶ್ರೀರಾಮಮಂದಿರದಲ್ಲಿ 63ಅಡಿಯ ರಾಜ್ಯದ ಅತಿಡೊಡ್ಡ ಶ್ರೀರಾಮಾಂಜನೇಯ ಮೂರ್ತಿ ನಿರ್ಮಾಣ ಶಿಲ್ಪಿ ಜೀವನ್ ರವರಿಗೆ ಅಮರ ಶಿಲ್ಪಿ ಜಕಣಾಚಾರಿ ಎಂಬ ಪ್ರಶಸ್ತಿಯನ್ನು ರಂಭಾಪುರಿ ಜಗದ್ಗುರುಗಳು ನೀಡಿದ್ದಾರೆ.
ಅತಿ ಕಿರಿಯ ವಯಸ್ಸಿನಲ್ಲಿ ಶಿಲ್ಪಕಲೆಯಲ್ಲಿ ಅಪಾರ ಸಾಧನೆ ಮಾಡಿರುವ ಶಿಲ್ಪಿ ಜೀವನ್ ರವರು ಸಾಧನೆ ಕನ್ನಡಿಗರ ಹೆಮ್ಮೆಯಾಗಿದೆ.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು, ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ, ಸಚಿವರಾದ ರಾಮಲಿಂಗಾರೆಡ್ಜಿ ,ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶ್ರೀರಾಮಸೇವಾ ಮಂಡಳಿ ಅಧ್ಯಕ್ಷರಾದ ಶ್ರೀಧರ್, ಹೆಚ್.ಎಂ.ಕೃಷ್ಣಮೂರ್ತಿ, ಆರ್.ವಿ.ಹರೀಶ್, ಸಾವಿತ್ರಿ ಸುರೇಶ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯರುಗಳಾದ ರಂಗಣ್ಣ, ಮೋಹನ್ ಕುಮಾರ್, ಮಂಜುನಾಥ್, ದೀಪ ನಾಗೇಶ್ ಉಪಸ್ಥಿತರಿದ್ದರು.
ಇತಿಹಾಸದಲ್ಲಿ ಮೊದಲ ಬಾರಿಗೆ 80,000 ರೂ.ಗಳನ್ನು ದಾಟಿದ ಚಿನ್ನದ ಬೆಲೆ | Gold Price