ಜೆರುಸಲೆಮ್ : ಜೆರುಸಲೆಮ್ ಹೊರವಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ, ಇಸ್ರೇಲಿ ಪೊಲೀಸರು ಇದನ್ನು ಭಯೋತ್ಪಾದಕ ದಾಳಿ ಎಂದು ಹೇಳಿದ್ದಾರೆ. ದುಷ್ಕರ್ಮಿಗಳನ್ನ ತಟಸ್ಥಗೊಳಿಸಲಾಗಿದೆ ಎಂದು ಇಸ್ರೇಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸಧ್ಯ ಈ ಕೃತ್ಯವನ್ನ ಪ್ರಧಾನಿ ಮೋದಿ ಖಂಡಿಸಿದ್ದಾರೆ.
ಪ್ರಧಾನಿ ಮೋದಿ, “ಇಂದು ಜೆರುಸಲೆಮ್’ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಘೋರ ಭಯೋತ್ಪಾದಕ ದಾಳಿಯನ್ನ ಬಲವಾಗಿ ಖಂಡಿಸುತ್ತೇವೆ. ಬಲಿಪಶುಗಳ ಕುಟುಂಬಗಳಿಗೆ ನಾವು ನಮ್ಮ ಹೃತ್ಪೂರ್ವಕ ಸಂತಾಪಗಳನ್ನ ವ್ಯಕ್ತಪಡಿಸುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಭಾರತವು ಭಯೋತ್ಪಾದನೆಯನ್ನ ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸುತ್ತದೆ ಮತ್ತು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯಲ್ಲಿ ದೃಢವಾಗಿ ನಿಂತಿದೆ” ಎಂದಿದ್ದಾರೆ.
ಅಂದ್ಹಾಗೆ, ಜೆರುಸಲೆಮ್’ನ ಯಿಗಲ್ ಯಾಡಿನ್ ಸ್ಟ್ರೀಟ್’ನಲ್ಲಿರುವ ರಾಮೋಟ್ ಜಂಕ್ಷನ್’ನಲ್ಲಿ ಗುಂಡಿನ ದಾಳಿ ಘಟನೆ ನಡೆದಿದೆ. ಜೆರುಸಲೆಮ್‌ನಲ್ಲಿ ಭಯೋತ್ಪಾದಕರು ಬಸ್ ಹತ್ತಿ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
Strongly condemn the heinous terrorist attack on innocent civilians in Jerusalem today. We extend our heartfelt condolences to the families of the victims and wish a speedy recovery to those injured.
India condemns terrorism in all its forms and manifestations and stands firm in…
— Narendra Modi (@narendramodi) September 8, 2025
8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ‘DA’ ಹೆಚ್ಚಳ, ಶೇ.30ರಷ್ಟು ‘ಸ್ಯಾಲರಿ’ ಹೈಕ್
8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ‘DA’ ಹೆಚ್ಚಳ, ಶೇ.30ರಷ್ಟು ‘ಸ್ಯಾಲರಿ’ ಹೈಕ್
BIGG NEWS : ಭಾರತ-ಇಸ್ರೇಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ, ಆರ್ಥಿಕ ಸಂಬಂಧಗಳಿಗೆ ಉತ್ತೇಜನ