ಶಿವಮೊಗ್ಗ: ನಗರದಲ್ಲಿ ರೈಲಿನ 6 ಬೋಗಿಗಳು ರೈಲಿನಿಂದ ಬೇರ್ಪಟ್ಟಿದ್ದಾವೆ. ಆದರೇ ಹಳಿಯ ಮೇಲೆ ನಿಂತಿದ್ದರಿಂದಾಗಿ ಮಹಾ ರೈಲು ದುರಂತವೊಂದು ತಪ್ಪಿದೆ.
ಶಿವಮೊಗ್ಗ ನಗರದ ತುಂಗಾ ಸೇತುವೆ ಮೇಲೆ ರೈಲಿನ 6 ಬೋಗಿಗಳು ಬೇರ್ಪಟ್ಟಿದ್ದಾವೆ. ಆ ಬಳಿಕ ರೈಲಿನ ಬೋಗಿಗಳು ತುಂಗಾ ಸೇತುವೆ ಮೇಲೆಯೇ ನಿಂತಿದ್ದರಿಂದ ಮುಂದಾಗಲಿದ್ದಂತ ಅನಾಹುತವೊಂದು ತಪ್ಪಿದಂತೆ ಆಗಿದೆ.
ಪ್ಯಾಸೆಂಜರ್ ರೈಲಿನ 21 ಬೋಗಿಗಳ ಪೈಕಿ 6 ಬೋಗಿಗಳು ಬೇರ್ಪಟ್ಟಿದ್ದಾವೆ. ಹೀಗಾಗಿ ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ತುಂಗಾ ಬ್ರಿಡ್ಜ್ ಮೇಲೆಯೇ ರೈಲು ಬೋಗಿಗಳು ನಿಂತಿದ್ದರಿಂದ ಮಹಾ ರೈಲು ದುರಂತವೊಂದು ತಪ್ಪಿದಂತೆ ಆಗಿದೆ.
48 ನಿಮಿಷಗಳ ಕಾರ್ಯಾಚಾರಣೆಯನ್ನು ನಡೆಸಿದಂತ ರೈಲ್ವೆ ಸಿಬ್ಬಂದಿಗಳು ಕೊನೆಗೂ ಯಶಸ್ವಿಯಾಗಿ ಬೇರ್ಪಟ್ಟಿದ್ದಂತ ರೈಲಿನ ಬೋಗಿಗಳನ್ನು ಜೋಡಿಸಿದ್ದಾರೆ. ಈ ರೀತಿಯಾಗಿ ಬೋಗಿ ಜೋಡಣೆಯ ಬಳಿಕ ರೈಲು ಸಂಚಾರ ಪುನರಾರಂಭಗೊಂಡಿದೆ.
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!
ರಾಜ್ಯದಲ್ಲಿ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಿಸಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ