ಶಿವಮೊಗ್ಗ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದಂತ ಮಾತ್ರೆಯನ್ನು ಸೇವಿಸಿ 59 ಮಕ್ಕಳು ಅಸ್ವಸ್ಥಗೊಂಡಿರುವಂತ ಘಟನೆ ಅರಳಿಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿಯಲ್ಲಿ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆ ಖನಿಜಾಂಶದ ಮಾತ್ರೆ ನೀಡಲಾಗಿತ್ತು. ಅನಿಮಿಯಾ ತಡೆಗಟ್ಟೋ ಸಂಬಂಧ ವಾರಕ್ಕೊಮ್ಮೆ ಖನಿಜಾಂಶದ ಮಾತ್ರೆಯನ್ನು ನೀಡಲಾಗುತ್ತಿತ್ತು.
ಇಂದು ಕೂಡ ಖನಿಜಾಂಶ ಯುಕ್ತ ಮಾತ್ರೆಯನ್ನು ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿತ್ತು. ಈ ಮಾತ್ರೆಯನ್ನು ಸೇವಿಸಿದ್ದಂತಿಂದ 59 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ರಾಜ್ಯದ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ‘ಮಹಾತ್ಮ ಗಾಂಧಿ’ ಹೆಸರಿಡಲಾಗುವುದು: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ








