ನವದೆಹಲಿ : ಲೋಕಸಭಾ ಚುನಾವಣೆ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಜನರು ಏನು ಯೋಚಿಸುತ್ತಿದ್ದಾರೆ. ಸರ್ಕಾರವಾಗಿ ಎನ್‌ಡಿಎ ಕಾರ್ಯಕ್ಷಮತೆ ಹೇಗಿದೆ.? ಇಂದು ಲೋಕಸಭಾ ಚುನಾವಣೆ ನಡೆದರೆ, ಜನರ ಮನಸ್ಥಿತಿ ಹೇಗಿರುತ್ತದೆ.? ಇದನ್ನು ಅಳೆಯಲು, ಇಂಡಿಯಾ ಟುಡೇ ಸಿ-ವೋಟರ್ ಸಹಯೋಗದೊಂದಿಗೆ ‘ರಾಷ್ಟ್ರದ ಮನಸ್ಥಿತಿ’ ಸಮೀಕ್ಷೆಯನ್ನ ನಡೆಸಿತು. ಸಮೀಕ್ಷೆಯ ಮಾದರಿ ಗಾತ್ರವನ್ನ 2 ಲಕ್ಷ 6 ಸಾವಿರ 826 ಎಂದು ಇರಿಸಲಾಗಿತ್ತು. ಈ ಸಮೀಕ್ಷೆಯನ್ನ ಜುಲೈ 1, 2025 ಮತ್ತು ಆಗಸ್ಟ್ 14, 2025ರ ನಡುವೆ ನಡೆಸಲಾಯಿತು.
ಸಮೀಕ್ಷೆಯಲ್ಲಿ, ಪ್ರಧಾನಿಯಾಗಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆ ಹೇಗಿದೆ ಎಂದು ಜನರನ್ನ ಕೇಳಲಾಯಿತು.? ಈ ಪ್ರಶ್ನೆಗೆ, 34% ಜನರು ತುಂಬಾ ಒಳ್ಳೆಯದು ಎಂದು ಹೇಳಿದ್ರೆ, 24% ಜನರು – ಒಳ್ಳೆಯದು ಎಂದು ಹೇಳಿದ್ದಾರೆ. ಇನ್ನು 13% ಜನರು ಕೆಟ್ಟದು ಎಂದಿದ್ರೆ, 14% ಜನರು ತುಂಬಾ ಕೆಟ್ಟದು ಎಂದು ಹೇಳಿದ್ದಾರೆ.
ಸರ್ಕಾರವಾಗಿ ಎನ್‌ಡಿಎ ಸಾಧನೆ ಹೇಗಿದೆ.?
ಈ ಪ್ರಶ್ನೆಗೆ, ಶೇ. 52ರಷ್ಟು ಜನರು ತಾವು ತೃಪ್ತರಾಗಿದ್ದೇವೆ ಅಥವಾ ತುಂಬಾ ತೃಪ್ತರಾಗಿದ್ದೇವೆ ಎಂದು ಹೇಳಿದ್ದಾರೆ. ಆದ್ರೆ, ಶೇ. 27ರಷ್ಟು ಜನರು ಅತೃಪ್ತರಾಗಿದ್ದಾರೆ ಅಥವಾ ತುಂಬಾ ಅತೃಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ಎನ್ ಡಿಎ ಸರ್ಕಾರದ ಪ್ರಮುಖ ಸಾಧನೆಗಳೇನು?
ಈ ಪ್ರಶ್ನೆಗೆ ಉತ್ತರವಾಗಿ, ಶೇ.17ರಷ್ಟು ಜನರು ರಾಮ ಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಪ್ರಮುಖ ಸಾಧನೆಗಳೆಂದು ಪರಿಗಣಿಸಿದರೆ, ಶೇ.12ರಷ್ಟು ಜನರು ಆಪರೇಷನ್ ಸಿಂಧೂರ್, ಶೇ.10ರಷ್ಟು ಜನರು ಮೂಲಸೌಕರ್ಯ ಅಭಿವೃದ್ಧಿಯನ್ನು ಎನ್ ಡಿಎ ಸರ್ಕಾರದ ಪ್ರಮುಖ ಸಾಧನೆಗಳೆಂದು ಪರಿಗಣಿಸುತ್ತಾರೆ. ಶೇ.9ರಷ್ಟು ಜನರು ಕಾಶ್ಮೀರದಿಂದ 370ನೇ ವಿಧಿಯನ್ನ ರದ್ದುಪಡಿಸಿರುವುದನ್ನು, ಶೇ.7ರಷ್ಟು ಜನರು ಕಲ್ಯಾಣ ಯೋಜನೆಗಳನ್ನ ಪರಿಗಣಿಸಿದರೆ, ಶೇ.6ರಷ್ಟು ಜನರು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನ ಪ್ರಮುಖ ಸಾಧನೆಯೆಂದು ಪರಿಗಣಿಸುತ್ತಾರೆ.
ಎನ್ಡಿಎ ಸರ್ಕಾರದ ಪ್ರಮುಖ ವೈಫಲ್ಯಗಳು ಯಾವುವು?
ಈ ಪ್ರಶ್ನೆಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನ ಹೊಂದಿದ್ದು, 27% ಜನರು ನಿರುದ್ಯೋಗ ಎಂದು ಹೇಳಿದ್ದಾರೆ. 21% ಜನರು ಬೆಲೆ ಏರಿಕೆ ಅಥವಾ ಹಣದುಬ್ಬರ ಎಂದು ಹೇಳಿದ್ದಾರೆ. 7% ಜನರು ಆರ್ಥಿಕ ಅಭಿವೃದ್ಧಿಯನ್ನ ಪರಿಗಣಿದ್ದು, 6% ಜನರು ಕೋಮು ಹಿಂಸಾಚಾರ ಮತ್ತು ಅಲ್ಪಸಂಖ್ಯಾತರಲ್ಲಿ ಭಯವನ್ನ ಪರಿಗಣಿಸಿದ್ದಾರೆ ಮತ್ತು 5% ಜನರು ಮಹಿಳಾ ಸುರಕ್ಷತೆಯನ್ನ ಪ್ರಮುಖ ವೈಫಲ್ಯಗಳೆಂದು ಪರಿಗಣಿಸಿದ್ದಾರೆ.
‘ಶ್ರೀರಂಗಪಟ್ಟಣ ದಸರಾ’ಗೆ ಮುಹೂರ್ತ ಫಿಕ್ಸ್: ಸೆ.25ರಿಂದ ನಾಲ್ಕು ದಿನ ಆಚರಣೆ
ಇಂದು ಲೋಕಸಭಾ ಚುನಾವಣೆ ನಡೆದ್ರೆ ‘NDA’ 300+ ಸ್ಥಾನಗಳಲ್ಲಿ ಗೆದ್ದು ಬೀಗುತ್ತೆ ; ಸಿ ವೋಟರ್ ಸಮೀಕ್ಷೆ