ಬೆಂಗಳೂರು : ಬೆಂಗಳೂರು: ನಾಡಿನ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯು ಯಶಸ್ವಿಯಾಗಿ 2 ವರುಷ ಪೂರೈಸಿದ್ದು, ಈ ಹೊತ್ತಿನಲ್ಲಿ ಬರೋಬ್ಬರಿ 500 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 500ನೇ ಕೋಟಿಯ ವಿಶೇಷ ಟಿಕೆಟ್ ನ್ನು ವಿತರಣೆ ಮಾಡಲಿದ್ದಾರೆ. ಬಿಎಂಟಿಸಿ ವತಿಯಿಂದ ಕುಮಾರಪಾರ್ಕ್ ಈಸ್ಟ್ ಬಳಿಯ ವಿಂಡ್ಲರ್ ವೃತ್ತದ ಬಳಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಉಚಿತ ಪ್ರಯಾಣ ಸ್ಕಿಮ್ಗೆ 2023ರ ಜೂ.11ರಂದು ಚಾಲನೆ ನೀಡಲಾಗಿತ್ತು, ಯೋಜನೆ ಆರಂಭವಾದ 2 ವರ್ಷದಲ್ಲೇ 500 ಕೋಟಿ ಟಿಕೆಟ್ ವಿತರಣೆಯಾಗಿದೆ.
ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಹಿಳಾ ಪ್ರಯಾಣಿಕರಿಗೆ ನಿರ್ವಾಹಕರಂತೆ ಟಿಕೆಟ್ ನೀಡಲಿದ್ದಾರೆ. 500ನೇ ಕೋಟಿಯ ಟ್ರಿಪ್ ಪ್ರಯಾಣಿಸುತ್ತಿರುವ ಅದೃಷ್ಟ ಮಹಿಳೆಗೆ ಸಿಎಂ ಸಿದ್ದರಾಮಯ್ಯ ಸ್ವತಃ ಟಿಕೆಟ್ ವಿತರಿಸಲಿದ್ದಾರೆ.