ಬೆಂಗಳೂರು: ನಿನ್ನೆ ನಗರದಲ್ಲಿ ಭಾರೀ ಮಳೆ ಅವಾಂತರವನ್ನೇ ಸೃಷ್ಠಿಸಿತ್ತು. ಪೂರ್ವ ಮುಂಗಾರು ಮಳೆ ತಂದ ಅವಾಂತರಕ್ಕೆ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಬರೋಬ್ಬರಿ 50 ಮರಗಳು ಧರೆಗುರುಳಿದ್ದಾವೆ. ಅಲ್ಲದೇ 171 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ.
ಬಿಬಿಎಂಪಿಯಿಂದ ಅಂಕಿ ಅಂಶಗಳನ್ನು ಒಳಗೊಂಡ ಮಾಹಿತಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಸೌತ್ ವಿಭಾಗದಲ್ಲಿ 10 ಮರಗಳು ಬಿದ್ದಿದ್ದರೇ, ರಾಜರಾಜೇಶ್ವರಿ ನಗರದಲ್ಲಿ 32, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 6, ಬೆಂಗಳೂರು ವೆಸ್ಟ್ ನಲ್ಲಿ 10, ಮಹದೇವಪುರ ವ್ಯಾಪ್ತಿಯಲ್ಲಿ 1, ಯಲಹಂಕದಲ್ಲಿ 3, ಬೆಂಗಳೂರು ಈಸ್ಟ್ ನಲ್ಲಿ 6 ಹಾಗೂ ದಾಸರಹಳ್ಳಿಯಲ್ಲಿ 2 ಸೇರಿದಂತೆ 70 ಮರಗಳು ಉರುಳಿ ಬಿದ್ದಿದ್ದಿವೆ. ಈವರೆಗೆ 55 ಮರಗಳನ್ನು ತೆರವು ಮಾಡಲಾಗಿದೆ ಎಂದಿದೆ.
ಇನ್ನೂ ಬೆಂಗಳೂರು ಸೌಥ್ ವ್ಯಾಪ್ತಿಯಲ್ಲಿ 30 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದರೇ, ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 63, ಬೊಮ್ಮನಹಳ್ಳಿಯಲ್ಲಿ 22, ಬೆಂಗಳೂರು ವೆಸ್ಟ್ ನಲ್ಲಿ 25, ಮಹದೇವಪುರದಲ್ಲಿ 2, ಯಲಹಂಕದಲ್ಲಿ 5, ಬೆಂಗಳೂರು ಈಸ್ಟ್ ನಲ್ಲಿ 22 ಹಾಗೂ ದಾಸರಹಳ್ಳಿ ವ್ಯಾಪ್ತಿಯಲ್ಲಿ 2 ಮರಗಳ ರೆಂಬೆ ಕೊಂಬೆ ಸೇರಿದಂತೆ 171 ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದಿವೆ. ಈವರೆಗೆ 119 ಮರಗಳ ರೆಂಬೆಕೊಂಬೆಯನ್ನು ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಯಾವುದೇ ನಿರ್ಬಂಧ ವಿಧಿಸಿಲ್ಲ: BBMP ಸ್ಪಷ್ಟನೆ
BREAKING : ಮೆಗಾಸ್ಟಾರ್ ಚಿರಂಜೀವಿ ಸೇರಿ 132 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ, ಇಲ್ಲಿದೆ ಲಿಸ್ಟ್