ಬಳ್ಳಾರಿ: ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಇಲ್ಲಿನ JSW ಟೌನ್ ಶಿಪ್ ನಲ್ಲಿ ಆಯೋಜಿಸಿದ್ದ ಯೋಗರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 50 ಮಂದಿ ಸಿದ್ದಗುರುಗಳು ಒಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು “ಯೋಗರಾಮಯ್ಯ ಮತ್ತು ಕರ್ಮಯೋಗಿರಾಮಯ್ಯ” ಎಂದು ಪ್ರಶಂಶಿಸಿ ಅಭಿನಂದಿಸಿದರು.
ಐವತ್ತಕ್ಕೂ ಹೆಚ್ಚು ಶ್ರಮಿಕ ಸಮುದಾಯಗಳ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 50 ಮಂದಿ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರವಾದ ಕಾಳಜಿ, ಸಾಮಾಜಿಕ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಆಶೀರ್ವದಿಸಿದರು.
ಶ್ವಾಸಯೋಗ ಸಂಸ್ಥೆ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಆಯೋಜಿಸಿದ್ದ “ಯೋಗ ರತ್ನ-2024” ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡುವುದಕ್ಕೆ ಮೊದಲೇ ನಾನು ರಾಜ್ಯದಲ್ಲಿ ಯೋಗದಿನವನ್ನು ಆಚರಿಸುವ ಮೂಲಕ ಯೋಗ ವಿಜ್ಞಾನವನ್ನು ಜನರಲ್ಲಿ ವಿಸ್ತರಿಸುವ ಕಾರ್ಯಕ್ಕೆ ಮುಂದಾದೆ ಎಂದರು.
ಸಮಾಜದ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತಿರುವ ಸ್ವಾಮೀಜಿಗಳು ಒಟ್ಟಾಗಿ ತಮ್ನನ್ನು ಮತ್ತು ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಒಪ್ಪಿ ಆಶೀರ್ವದಿಸಿದಕ್ಕಾಗಿ ಸ್ವಾಮೀಜಿಗಳ ಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧನ್ಯವಾದ ಅರ್ಪಿಸಿದರು.
ನಿಮ್ಮ ಮನಸ್ಸು , ದೇಹ, ಅಧ್ಯಾತ್ಮಿಕ ಚೈತನ್ಯ ಆರೋಗ್ಯಕರವಾಗಿ ಇರಬೇಕಾದರೆ ಯೋಗ ವಿಜ್ಞಾನದ ಜ್ಞಾನವನ್ನು ಕಲಿತು, ಪ್ರಾಕ್ಟೀಸ್ ಮಾಡಬೇಕು. ಇದರಿಂದ ಮನಸ್ಸು, ದೇಹ ಮತ್ತು ದೇಶ ರೋಗ ರಹಿತವಾಗಿ ಸಮಾಜಮುಖಿಯಾಗಿ ಬೆಳೆಯುತ್ತದೆ ಎಂದರು.
ಪರಸ್ಪರ ಮನುಷ್ಯ ಗೌರವ, ಮನುಷ್ಯ ಪ್ರೇಮ ತೋಗ ವಿಜ್ಞಾನದಿಂದ ಬೆಳೆಯುತ್ತದೆ ಎಂದು ಅಭಿಪ್ರಾಯಪಟದಟರು.
ವಚನಾನಂದ ಸ್ವಾಮಿಗಳು, ಇಳಕಲ್ ಮಠದ ಶರಣರು ಸೇರಿ 50 ಮಂದಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಂ, ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರಿನ ಅಗತ್ಯಗಳಿಗೆ ಮತ್ತೊಂದು ವಿಮಾನ ನಿಲ್ದಾಣ; ಅಧಿಕಾರಿಗಳ ಜತೆ ಸಚಿವ ಎಂ.ಬಿ ಪಾಟೀಲ್ ಮಹತ್ವದ ಸಭೆ