ದೆಹಲಿ: ಯಮುನಾ ನದಿಯಲ್ಲಿ ಭಾನುವಾರ ಶ್ರೀಕೃಷ್ಣ ಮೂರ್ತಿಯ ನಿಮಜ್ಜನದ ವೇಳೆ ಡಿಎನ್‌ಡಿ ಮೇಲ್ಸೇತುವೆಯಡಿಯಲ್ಲಿ ಮುಳುಗಿ ಐವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಅಂಕಿತ್ (20), ಲಕ್ಕಿ (16) ಲಲಿತ್ (17) ಬೀರು (19) ಮತ್ತು ರಿತು ರಾಜ್ ಅಲಿಯಾಸ್ ಸಾನು (20) ಎಂದು ಗುರುತಿಸಲಾಗಿದೆ.

ಮಾಹಿತಿ ಪ್ರಕಾರ, ನಿಮಜ್ಜನದ ನಂತರ ವಿಗ್ರಹವು ನದಿಯ ಮಧ್ಯದಲ್ಲಿ ಸಿಲುಕಿಕೊಂಡಿತು. ಹೀಗಾಗಿ, ಈ ಆರು ಹುಡುಗರು ನದಿಗೆ ಇಳಿದಿದ್ದರು. ಇವರುಗಳಲ್ಲಿ ಒಬ್ಬರು ಮಾತ್ರ ಹಿಂತಿರುಗುವಲ್ಲಿ ಯಶಸ್ವಿಯಾದರು. ಆದ್ರೆ ಈ ಐದು ಹುಡುಗರು ಮಾತ್ರ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಐವರು ಯುವಕರ ಶವಗಳನ್ನು ನದಿಯಿಂದ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಎಲ್ಲರೂ ಗ್ರೇಟರ್ ನೋಯ್ಡಾದ ಸಲಾರ್‌ಪುರ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

BIG NEWS: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಮೇಲ್ಮನವಿ ವಿಚಾರಣೆ | Hijab Row Suprem court

BIG NEWS: ರಾಮಮಂದಿರ ಕೆಲಸ ಶೇ.40ರಷ್ಟು ಪೂರ್ಣ: 2023ರ ಡಿಸೆಂಬರ್ ಗೆ ಭಕ್ತರಿಗೆ ಮುಕ್ತ

ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆ: ಸೆ.24ರಿಂದ ನಾಮಪತ್ರ ಸಲ್ಲಿಕೆ ಆರಂಭ, ಆ.17ಕ್ಕೆ ಮತದಾನ, 19ಕ್ಕೆ ಫಲಿತಾಂಶ ಪ್ರಕಟ

Share.
Exit mobile version