ಚೀನಾದಲ್ಲಿ ಇಂದು ಮತ್ತೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ತಿಳಿಸಿದೆ.
ಚೀನಾದ ಜಿಗಾಂಗ್ ಪ್ರಾಂತ್ಯದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿತು. ಭೂಕಂಪದ ಆಳವನ್ನು 10 ಕಿಲೋಮೀಟರ್ ಎಂದು ಅಳೆಯಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (ಜಿಎಫ್ಜೆಡ್) ಪ್ರಕಾರ, ಚೀನಾದ ಕ್ಸಿಜಿಯಾಂಗ್ ಪ್ರದೇಶದಲ್ಲಿ ಶನಿವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದಕ್ಕೂ ಎರಡು ದಿನಗಳ ಮೊದಲು, ಬಹುತೇಕ ಅದೇ ತೀವ್ರತೆಯ ಭೂಕಂಪವು ಇಲ್ಲಿ ಸಂಭವಿಸಿತ್ತು. ಭೂಕಂಪವು 10 ಕಿಲೋಮೀಟರ್ (6.2 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ.