ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಇಂದು ಬೆಳಗಿನ ಜಾವ 2:07 ರ ಸುಮಾರಿಗೆ ಭೂಕಂಪ(earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ.

ಇಂದು ಬೆಳಗಿನ ಜಾವ 2:07ರ ಸುಮಾರಿಗೆ ಅಫ್ಘಾನಿಸ್ತಾನದ ಫೈಜಾಬಾದ್‌ನ ದಕ್ಷಿಣಕ್ಕೆ 89 ಕಿಮೀ ದೂರದಲ್ಲಿ ಮತ್ತು 200 ಕಿಲೋಮೀಟರ್ ಆಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸಮ್‌ನ ಟ್ವೀಟ್ ಮಾಡಿದೆ.

ಘಟನೆಯಿಂದ ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಪಾಕಿಸ್ತಾನ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲೂ ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

BIG NEWS: ಮಂಗಳೂರಿನಲ್ಲಿ ಬಿಜೆಪಿ ಯುವ ಮುಂಡನ ಭೀಕರ ಕೊಲೆ, ಹಂತಕರಿಗಾಗಿ ಪೋಲಿಸರ ಭೇಟೆ

JOBS NEWS: ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ , ಇಲ್ಲಿದೆ ಮಾಹಿತಿ

ಭೀಕರ ಅಪಘಾತ: ತಾಂಜಾನಿಯಾದಲ್ಲಿ ಕಂದಕಕ್ಕೆ ಉರುಳಿದ ಬಸ್:‌ ಶಾಲಾ ಮಕ್ಕಳು ಸೇರಿ 13 ಜನರ ದುರ್ಮರಣ

Share.
Exit mobile version