ದಾರ್ ಎಸ್ ಸಲಾಮ್ (ತಾಂಜಾನಿಯಾ): ಶಾಲಾ ಬಸ್ ರಸ್ತೆಯಿಂದ ಕಂದಕಕ್ಕೆ ಉರುಳಿದ ಪರಿಣಾಮ 11 ನರ್ಸರಿ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 13 ಜನರು ಸಾವನ್ನಪ್ಪಿರುವ ಘಟನೆ ಮಂಗಳವಾರ ದಕ್ಷಿಣ ತಾಂಜಾನಿಯಾದದಲ್ಲಿ ನಡೆದಿದೆ.

ಮಂಗಳವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಸುಮಾರು 13 ಜನರು ಸಾವನ್ನಪ್ಪಿದರೆ, 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಬಸ್ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ಬ್ರೇಕ್ ವೈಫಲ್ಯವಾದ ಕಾರಣ Mtwara ಪುರಸಭೆಯ ಹೊರವಲಯದಲ್ಲಿರುವ ಮಿಕಿಂದನಿ( Mikindani) ನಲ್ಲಿ ಘಟನೆ ಸಂಭವಿಸಿದೆ ಎಂದು Mtwara ಕಾರ್ಯನಿರ್ವಹಣೆಯ ಪ್ರಾದೇಶಿಕ ಪೊಲೀಸ್ ಕಮಾಂಡರ್ ನಿಕೋಡೆಮಸ್ ಕಟೆಂಬೊ ಹೇಳಿದ್ದಾರೆ.

ಗಾಯಗೊಂಡ 16 ಮಕ್ಕಳನ್ನು ಚಿಕಿತ್ಸೆಗಾಗಿ Mtwara ಪ್ರಾದೇಶಿಕ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಮಕ್ಕಳನ್ನು ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು ಐದು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

BIG NEWS: ಮಂಗಳೂರಿನಲ್ಲಿ ಬಿಜೆಪಿ ಯುವ ಮುಂಡನ ಭೀಕರ ಕೊಲೆ, ಹಂತಕರಿಗಾಗಿ ಪೋಲಿಸರ ಭೇಟೆ

ದಾವಣಗೆರೆ: ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

JOBS NEWS: ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ , ಇಲ್ಲಿದೆ ಮಾಹಿತಿ

Share.
Exit mobile version