ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಗ್ಗೆ ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತಿನ್ ಕೃಷ್ಣ ಎಂಬ ಬಳಕೆದಾರರು ಬಿಎಂಟಿಸಿ ಬಸ್ ನಲ್ಲಿ ತಮ್ಮ ಅನುಭವವನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ, ಕಂಡಕ್ಟರ್ನಿಂದ ಪಡೆಯಬೇಕಿದ್ದ 5 ರೂ.ಗಳನ್ನು ಪಡೆದುಕೊಂಡಿಲ್ಲ ಅಂತ ದೂರಿದ್ದಾರೆ.
ಈ ಕಂಡಕ್ಟರ್ ಹಿಂದಿರುಗಿಸಲು 1 ರೂಪಾಯಿ ಚಿಲ್ಲರೆ (?) ಸಹ ಇಲ್ಲದ ಕಾರಣ ನಾನು ನನ್ನ 5 ರೂಪಾಯಿಗಳನ್ನು ಕಳೆದುಕೊಂಡೆ. ಇದಕ್ಕೆ ಏನಾದರೂ ಪರಿಹಾರವಿದೆಯೇ? ಅಂಥ ಅವರು ಬಿಎಂಟಿಸಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಅಪ್ಲೋಡ್ ಮಾಡಿದಾಗಿನಿಂದ, ನಿತಿನ್ ಅವರ ಪೋಸ್ಟ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯಿತು, ಸುಮಾರು 71 ಸಾವಿರ ವೀಕ್ಷಣೆಗಳನ್ನು ಗಳಿಸಿತು ಮತ್ತು ಆನ್ಲೈನ್ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ . ಬಿಎಂಟಿಸಿಯ ಅಧಿಕೃತ ಹ್ಯಾಂಡಲ್ ಕೂಡ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯಿಸಿದೆ. “ನಿಮ್ಮ ದೂರಿನಲ್ಲಿ ಡಾಕೆಟ್ ಸಂಖ್ಯೆ BMTC2024003258 ನೋಂದಾಯಿಸಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.
I lost my 5 rs as this conductor didnt had even 1 rupee change (?) to return. Is there any solution to this? @BMTC_BENGALURU pic.twitter.com/2KFCCN5EOW
— Nithin Krishna (@N_4_NITHIN) April 14, 2024